ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣದರ ಏರಿಕೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದರ ಏರಿಕೆ ಬೆನ್ನಲ್ಲೇ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಆಗಿರುವ ಬಗ್ಗೆ ಕೂಡ ವರದಿಯಾಗಿತ್ತು. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಎಂಆರ್ಸಿಎಲ್ ಗೆ ಮಾತ್ರ ಸೂಚನೆ ನೀಡಿರುವ ಬಗ್ಗೆ ವರದಿಯಾಗಿತ್ತು.
ಅದರ ಬೆನ್ನಲ್ಲೇ ಇದೀಗ ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್ ಪತ್ರಿಕಾಗೋಷ್ಠಿ ನಡೆಸಿ ಮಹತ್ವದ ಮಾಹಿತಿ ನೀಡಿದ್ದರು. ಇದೀಗ ಇಂದಿನಿಂದ ಹೊಸ ದರ ಜಾರಿ ಮಾಡಿದೆ. ಬಿಎಂಆರ್ಸಿಎಲ್ ಒಟ್ಟು 10 ರೂಪಾಯಿ ಇಳಿಕೆ ಮಾಡಿದೆ.
ಯಾವ ಮಾರ್ಗದಲ್ಲಿ ಎಷ್ಟು ದರ ಇಳಿಕೆ?
ಮೆಜೆಸ್ಟಿಕ್ ನಿಂದ ರೇಷ್ಮೆಸಂಸ್ಥೆಗಿದ್ದ 70 ರೂ ಈಗ 60 ರೂ ಆಗಿದೆ
ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿಗೆ 60 ರೂ ಇದ್ದ ಬೆಲೆ 50 ರೂಗೆ ಇಳಿಕೆ
ಜಾಲಹಳ್ಳಿಯಿಂದ ರೇಷ್ಮೆಸಂಸ್ಥೆಗೆ 90 ರೂ ದರ ,ಇದರಲ್ಲಿ ಬದಲಾವಣೆ ಮಾಡಿಲ್ಲ
ಮೆಜೆಸ್ಟಿಕ್ ನಿಂದ- ವೈ್ಟ್ ಫೀಲ್ಡ್ ಗೆ 90 ರೂ ಇದ್ದ ದರ ಈಗ 80 ರೂ
ಮೆಜೆಸ್ಟಿಕ್ – ಚಲ್ಲಘಟ್ಟಕ್ಕೆ 70 ರೂ ಇದ್ದ ದರ ಈಗ 60 ರೂ
ಮೆಜೆಸ್ಟಿಕ್-ವಿಧಾನಸೌಧಕ್ಕೆ 20 ರೂನಿಂದ 10 ರೂಪಾಯಿಗೆ ಇಳಿಕೆ
ಮೆಜೆಸ್ಟಿಕ್ ನಿಂದ- ಕಬ್ಬನ್ ಪಾರ್ಕ್ ಗೆ ಇದ್ದ 20 ರೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.