ಬೆಂಗಳೂರು:- ಬೆಂಗಳೂರು ಹೊರ ವಲಯದ ಜಿಗಣಿ ಹಳೆ ಬಸ್ ನಿಲ್ದಾಣದ ಬಳಿ ಬೈಕ್ಗೆ ಹಿಂಬದಿಯಿಂದ BMTC ಬಸ್ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದ ಸವಾರನ ಮೇಲೆ ಬಸ್ ಹರಿದ ಘಟನೆ ಸಂಭವಿಸಿದೆ.
Advertisement
ಇನ್ನೂ ಘಟನೆ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ.
ಮೃತ ಯುವಕ ಯಾರೆಂದು ಪತ್ತೆಯಾಗಿಲ್ಲ. ಇನ್ನು ಆಕ್ರೋಶಗೊಂಡ ಸ್ಥಳೀಯರು ಬಸ್ನ ಗ್ಲಾಸ್ನ್ನು ಪುಡಿ ಪುಡಿ ಮಾಡಿದ್ದು, ಬಿಎಂಟಿಸಿ ಚಾಲಕನಿಗೆ ಥಳಿಸಿದ್ದಾರೆ.
ಈ ಕುರಿತು ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.