ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ರೀಲ್ಸ್ ಗೀಳು ಹಿಡಿಯಲಾರಂಭಿಸಿದೆ. ಖಾಲಿ ಕುಳಿತ ಸಮಯದಲ್ಲಿ ರೀಲ್ಸ್ ಮಾಡಿದರೆ ಯಾರಿಗೂ ತೊಂದರೆಯಿಲ್ಲ. ಆದರೆ ಕೆಲವೊಮ್ಮೆ ಕರ್ತವ್ಯದಲ್ಲಿರುವ ವೇಳೆ ರೀಲ್ಸ್ ಮಾಡಲು ಹೋದರೆ ಅವಾಂತರಗಳು ನಡೆದು ಹೋಗುತ್ತೆ.
ಅದಕ್ಕೊಂದು ತಾಜಾ ನಿದರ್ಶನ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿರುವುದು. ಹೌದು ಹೊಸೂರು ರೋಡ್ ಟು ಲಾಲ್‌ಬಾಗ್ ನಡುವೆ ಸಂಚರಿಸುವ ಬಸ್‌ವೊಂದರ ಚಾಲಕ ಟ್ರಾಫಿಕ್ ನಡುವೆ ರೀಲ್ಸ್ ನೋಡುತ್ತ ಬಸ್ ಓಡಿಸುತ್ತಿರುವ ವೀಡಿಯೋ ಸಖತ್ ವೈರಲ್ ಆಗಿದೆ.
ಎರಡು ದಿನಗಳ ಹಿಂದೆ ಸಂಜೆ 5 ಗಂಟೆ ಸುಮಾರಿಗೆ ಸಂಚರಿಸುವ ವೇಳೆ ಟ್ರಾಫಿಕ್ ನಡುವೆ ಬಸ್ ಚಲಾಯಿಸುತ್ತಲೇ, ಸ್ಟೇರಿಂಗ್ ಮೇಲೆ ಮೊಬೈಲ್ ಹಿಡಿದು ರೀಲ್ಸ್ ಸ್ಕ್ರಾಲ್ ಮಾಡಿದ್ದಾನೆ. ಇದನ್ನ ಅದೇ ಬಸ್‌ನಲ್ಲಿ ಡ್ರೈವರ್ ಸೀಟಿನ ಹಿಂಬದಿ ಕುಳಿತಿದ್ದ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.