ಬೆಂಗಳೂರು: ನೇಣುಬಿಗಿದುಕೊಂಡು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಾಂತಿನಗರದ ಮೂರನೇ ಪ್ಲೋರ್ ನ ಕಚೇರಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿಮೂಲದ ಮಹೇಶ್(42) ಎಂಬಾತ ಇಡಿ ಕಚೇರಿಯ ಪಕ್ಕದಲ್ಲಿರುವ ಬಸ್ ನಿಲ್ದಾಣದ ಮೂರನೇ ಮಹಡಿಯ ಕಚೇರಿಯಲ್ಲಿ ಆತ್ಮಹತ್ಯೆ ಶರಣಾಗಿದ್ದಾನೆ.
Advertisement
ನಿನ್ನೆ ಬೆಳಗ್ಗೆ ಮೃತ ಮಹೇಶ್, ರೆಕಾರ್ಡ್ ರೂಮ್ನ ಬೀಗ ಕೇಳಿದ್ದನಂತೆ. ಇದೀಗ ಕಚೇರಿಯಲ್ಲಿ ನೇಣುಬಿಗಿದುಕೊಂಡು ಮಹೇಶ್ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.