ದೇಹವೆಂಬುದು ಅರಿಷಡ್ವರ್ಗಗಳ ಬಂಡಿ : ಫಕೀರೇಶ್ವರ ಶಿವಾರ್ಚಾಯರು

0
kumbmela
Spread the love

ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಕಳಸಾಪುರ ಸುಕ್ಷೇತ್ರದ ಶ್ರೀ ಈಶ್ವರ ಬಸವಣ್ಣ ದೇವರ 14ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವದ ಅಂಗವಾಗಿ ಬೃಹತ್ ಕುಂಭಮೇಳ ಜರುಗಿತು.

Advertisement

ಈ ಕುಂಭಮೇಳವು ಈಶ್ವರ ದೇವಸ್ಥಾನದಿಂದ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮರಳಿ ದೇವಸ್ಥಾನಕ್ಕೆ ತೆರಳಿ ಈಶ್ವರ ಲಿಂಗಕ್ಕೆ ಜಲಾಭಿಷೇಕಗೊಂಡಿತು. ನಂತರ ಧರ್ಮಸಭೆ ಜರುಗಿತು. ಈ ಸಂದರ್ಭದಲ್ಲಿ ಓಂಕಾರಗಿರಿ ಓಂಕಾರೇಶ್ವರ ಶ್ರೀಮಠದ ಪೂಜ್ಯಶ್ರೀ ಫಕೀರೇಶ್ವರ ಶಿವಾರ್ಚಾಯರು ಸಾನ್ನಿಧ್ಯ ವಹಿಸಿ ಮಾತನಾಡಿ, ದೇಹ ಎನ್ನುವುದು ಕಾಮ, ಕ್ರೋಧ, ಲೋಭ, ಮೋಹ, ಮತ್ಸರ, ಮದ ಎಂಬ ಬುನಾದಿಗಳನ್ನು ತುಂಬಿದ ಬಂಡಿಯಾಗಿದೆ. ರೈತರ ಬಂಡಿಗೆ ಕಬ್ಬಿಣದ ಕೀಲು ಆಸರೆಯಾದರೆ, ದೇಹದ ಈ ಬಂಡಿಗೆ ವಚನಗಳೇ ಕೀಲವಾಗಬೇಕಿದೆ ಎಂದು ಹೇಳಿದರು.

ಪ್ರವಚನಕಾರರಾದ ಶರಣಶ್ರೀ ಶಿವಲಿಂಗಯ್ಯಶಾಸ್ತಿçಗಳು ಹಿರೇಮಠ ಸಿದ್ದಾಪೂರ ಮಾತನಾಡಿ, ಸಪ್ತಸೂತ್ರಗಳು ಮನುಷ್ಯನ ಜೀವನದಲ್ಲಿ ಅಳವಡಿಸಿಕೊಂಡಾಗ ಕೋರ್ಟು-ಕಚೇರಿಗಳ ಮೆಟ್ಟಿಲು ಹತ್ತುವ ಅವಶ್ಯಕತೆ ಇರುವದಿಲ್ಲ. ಮಹಾತ್ಮ ಗಾಂಧೀಜಿ ಇದೇ ದೇಶದ ಜನತೆಗೆ ಕೂಡ ಮಾನವ ಬದುಕಿಗೆ ಏಳು ಸೂತ್ರಗಳು ಬಹುಮುಖ್ಯ ಎಂದು ಹೇಳಿದ್ದಾರೆ ಪ್ರತಿಯೊಬ್ಬರು ಕೂಡ ಜೀವನದಲ್ಲಿ ಏಳು ಸೂತ್ರಗಳನ್ನು ಅಳವಡಿಸಿಕೊಂಡು ಸಾಮಾನ್ಯರು ಶರಣರಾಗಬಹುದು ಎಂದು ಹೇಳಿದರು.

ವೇದಿಕೆ ಮೇಲೆ ಬಸಯ್ಯಸ್ವಾಮಿ ಇಟಗಿಮಠ, ಸಿ.ಬಿ. ಪಲ್ಲೇದ, ವೀರಯ್ಯ ಕಂಬಾಳಿಮಠ, ನಿಂಗನಗೌಡ ತಿಪ್ಪನಗೌಡ್ರ, ಸಾಧಿಕ ಶೇಖ, ಮಹಾಂತಯ್ಯ ಇಟಗಿಮಠ, ಬಸನಗೌಡ ರಾಮನಗೌಡ, ರಾಮಣ್ಣ ಅಣ್ಣಿಗೇರಿ, ಮಂಜುನಾಥ ಇಟಗಿಮಠ, ಬಸಯ್ಯ ಸಾಸ್ವಿಹಳ್ಳಿಮಠ, ಈರಣ್ಣ ಭಜಂತ್ರಿ, ಶ್ರೀಕಾಂತ ಹೂಗಾರ, ದ್ಯಾಮಣ್ಣ ಬಡಿಗೇರ, ಬಸವರಾಜ ಹಗೇದಾಳ, ಸಂತೋಷ ನಾಯ್ಕರ, ನಿಂಗಯ್ಯ ಇಟಗಿಮಠ, ಮಂಜುನಾಥ ಘೋಡಕೆ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here