ಬಾಲಿವುಡ್ ನಟ ಧರ್ಮೇಂದ್ರ ಕಣ್ಣಿಗೆ ಬ್ಯಾಂಡೇಜ್ ಹಾಕಿರೋದನ್ನು ನೋಡಿ ಫ್ಯಾನ್ಸ್ ಆತಂಕಗೊಂಡಿದ್ದಾರೆ. ಧರ್ಮೇಂದ್ರ ಅವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಮಾಡಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
Advertisement
ಆಸ್ಪತ್ರೆಯಿಂದ ನಿರ್ಗಮಿಸುವಾಗ ಧರ್ಮೇಂದ್ರ ಮಾತನಾಡಿ, ನನಗಿನ್ನೂ ಶಕ್ತಿಯಿದೆ, ನನಗೆ ಇನ್ನೂ ಜೀವನವಿದೆ. ಕಣ್ಣಿನ ಚಿಕಿತ್ಸೆ ಪಡೆದು ಬಂದಿದ್ದೇನೆ. ಲವ್ ಯೂ ಮೈ ಆಡಿಯನ್ಸ್, ಲವ್ ಯೂ ಫ್ಯಾನ್ಸ್, ನಾನು ಸ್ಟ್ರಾಂಗ್ ಆಗಿದ್ದೇನೆ ಎಂದಿದ್ದಾರೆ.
89ರ ವಯಸ್ಸಿನಲ್ಲೂ ಇಷ್ಟು ಉತ್ಸಾಹದಿಂದ ನಟ ಮಾತನಾಡಿದನ್ನು ಕೇಳಿ ಫ್ಯಾನ್ಸ್ ಭೇಷ್ ಎಂದಿದ್ದಾರೆ. ಇನ್ನೂ ತನ್ನ ಕಣ್ಣಿಗೆ ಏನಾಯಿತು ಎಂಬುದರ ಕುರಿತು ಹೆಚ್ಚಿನ ವಿವರವನ್ನು ನಟ ನೀಡಿಲ್ಲ. ಆದರೆ ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.