HomeEntertainmentಬಾಲಿವುಡ್‌ನ ದಂತಕಥೆ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ

ಬಾಲಿವುಡ್‌ನ ದಂತಕಥೆ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ

For Dai;y Updates Join Our whatsapp Group

Spread the love

ಬಾಲಿವುಡ್‌ನ ದಂತಕಥೆ ಹಾಗೂ ಹಿರಿಯ ನಟ ಧರ್ಮೇಂದ್ರ (Dharmendra) ಅವರು ಇಂದು ಬೆಳಗ್ಗೆ 89ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದರು.

ಧರ್ಮೇಂದ್ರ ಅವರ ಪತ್ನಿ ಹೇಮಾ ಮಾಲಿನಿ (Hema Malini), ಮೊದಲ ಪತ್ನಿ ಪ್ರಕಾಶ್ ಕೌರ್, ಹಾಗೂ ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್, ವಿಜೇತಾ, ಅಜೀತಾ, ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅವರನ್ನು ಅಗಲಿದ್ದಾರೆ. ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ಕಣ್ಣೀರಿನ ನಮನ ಸಲ್ಲಿಸಿದ್ದಾರೆ.

ಸಲ್ಮಾನ್ ಖಾನ್, ಶಾರುಖ್ ಖಾನ್, ಗೋವಿಂದ, ಅಮೀಷಾ ಪಟೇಲ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ತಡರಾತ್ರಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ತೆರಳಿ ಧರ್ಮೇಂದ್ರ ಅವರಿಗೆ ಅಂತಿಮ ವಿದಾಯ ಸಲ್ಲಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಹಾಗೂ ಕಲಾವಿದರಿಂದ ಶ್ರದ್ಧಾಂಜಲಿಗಳ ಸುರಿಮಳೆಯೇ ಹರಿದುಬಂದಿದೆ.

ಪಂಜಾಬ್‌ನ ಲುಧಿಯಾನಾ ಜಿಲ್ಲೆಯ ಹಳ್ಳಿಯೊಂದರಲ್ಲಿ 1954ರಲ್ಲಿ ಜನಿಸಿದ ಧರ್ಮೇಂದ್ರ, ಕೇವಲ 19ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾದರು. ಬಳಿಕ ನಟಿ ಹೇಮಾ ಮಾಲಿನಿಯವರೊಂದಿಗೆ ಪ್ರೀತಿಯಲ್ಲಿ ಮುಳುಗಿ ವಿವಾಹವಾದರು.

ಆರು ದಶಕಗಳ ಕಾಲ ಧರ್ಮೇಂದ್ರ ಅವರು ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದರು. ಅವರ ‘ಶೋಲೆ’, ‘ಯಾದೋಂ ಕಿ ಬಾರಾತ್’, ‘ಸತ್ಯಕಾಮ್’, ‘ಚುಪ್ಕೆ ಚುಪ್ಕೆ’ ಮುಂತಾದ ಚಿತ್ರಗಳು ಭಾರತೀಯ ಸಿನೆಮಾದ ಸ್ಮರಣೀಯ ಕೃತಿಗಳಾಗಿವೆ. ಅವರ ಅಭಿನಯ ಶೈಲಿ ಮತ್ತು ನೈಸರ್ಗಿಕ ವ್ಯಕ್ತಿತ್ವ ಪ್ರೇಕ್ಷಕರ ಹೃದಯ ಗೆದ್ದಿತ್ತು.

89ನೇ ವಯಸ್ಸಿನಲ್ಲಿಯೂ ಧರ್ಮೇಂದ್ರ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು. ಆರೋಗ್ಯಕರ ಹಾಗೂ ಸಾವಯವ ಜೀವನಶೈಲಿಯನ್ನು ಉತ್ತೇಜಿಸುವ ವೀಡಿಯೊಗಳು, ಟ್ರ್ಯಾಕ್ಟರ್ ಚಾಲನೆ ಮತ್ತು ತಮ್ಮ ತೋಟಗಾರಿಕೆ ಕೆಲಸಗಳ ಚಿತ್ರಗಳು ಅವರ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದವು.

ಧರ್ಮೇಂದ್ರ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ಅಪಾರ ನಷ್ಟ. ಅವರ ಕಲಾತ್ಮಕ ಪೈಪೋಟಿ, ಸರಳ ಜೀವನ ಮತ್ತು ಪ್ರೀತಿಯ ವ್ಯಕ್ತಿತ್ವ ಎಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಜೀವಂತವಾಗಿಯೇ ಉಳಿಯಲಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!