ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ‘ಉಗ್ರ ಅಜ್ಮಲ್ ಕಸಬ್ ಗಲ್ಲಿಗೆ ಹಾಕಿದ್ದು ಸರಿಯಿಲ್ಲ. ಶೌಚಾಲಯದ ಪೈಪ್ಲೈನ್ನಲ್ಲಿ ಬಾಂಬ್ ಇಟ್ಟಿದ್ದು, ಪಝಲ್ ಗೇಮ್ ರೀತಿ ಎರಡು ಕಡೆ ಬಾಂಬ್ ಇಟ್ಟಿದ್ದು ಪ್ಲ್ಯಾನ್ ಎ ಫೇಲ್ ಆದರೆ ಪ್ಲ್ಯಾನ್ ಬಿ’ ಎಂದು ಬೆದರಿಕೆ ಸಂದೇಶ ರವಾನಿಸಲಾಗಿದೆ.
ಬೆದರಿಕೆ ಮೇಲ್ ಹಿನ್ನೆಲೆ ಎಲ್ಲೆಡೆ ಪರಿಶೀಲನೆ ಮಾಡಿದ ಅಧಿಕಾರಿಗಳು ಬಳಿಕ ಇದೊಂದು ಹುಸಿ ಬಾಂಬ್ ಮೇಲ್ ಎಂದು ತಿಳಿಸಿದ್ದಾರೆ. ಸದ್ಯ ಕೆಂಪೇಗೌಡ ಏರ್ಪೋರ್ಟ್ ಪೊಲೀಸರು ಮತ್ತು ಅಧಿಕಾರಿಗಳಿಗೆ ಈ ಹುಸಿ ಬಾಂಬ್ ಮೇಲ್ ಮತ್ತು ಕರೆಗಳು ತಲೆ ನೋವಾಗಿದ್ದು,
ಹುಸಿ ಬಾಂಬ್ ಬೆದರಿಕೆ ಬಂದ ಮೇಲ್ ಐಡಿಗಳ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಒಂದೇ ವಾರದಲ್ಲಿ ಇದು ಎರಡನೇ ಹುಸಿ ಬಾಂಬ್ ಮೇಲ್ ಆಗಿದೆ. ಜೂ.13, 16ರಂದು ಎರಡು ಬಾಂಬ್ ಬೆದರಿಕೆ ಇ–ಮೇಲ್ ಬಂದಿತ್ತು.