ಬೆಂಗಳೂರು: ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಸ್ಪೋಟಿಸುವುದಾಗಿ ಇ ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಸಂದೇಶ ಬಂದ ಬೆನ್ನಲ್ಲೇ, ಸ್ಥಳೀಯ ಪೊಲೀಸರು ಶಾಲೆಗಳಿಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
Advertisement
ಈ ಬೆದರಿಕೆ ಸಂದೇಶದಲ್ಲಿ ಶಾಲಾಗಳಲ್ಲಿ ಕ್ಲಾಸ್ ರೂಮ್ ನಲ್ಲಿರುವ ಮಕ್ಕಳ ಬ್ಯಾಗ್ಗಳಲ್ಲೇ ಸ್ಫೋಟಕ ಇಟ್ಟಿರುವುದಾಗಿ ಪತ್ರದಲ್ಲಿ ಬರೆದಿದ್ದಾರೆ. ಬ್ಲಾಕ್ ಕಲರ್ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಸ್ಫೋಟಕ ಇರಿಸಲಾಗಿದೆ. ನಾನು ಪ್ರಪಂಚದ ಪ್ರತಿಯೊಬ್ಬರ ಹತ್ಯೆ ಮಾಡುತ್ತೇನೆ, ಒಬ್ಬನೂ ಬದುಕುಳಿಯಲು ಸಾಧ್ಯವಿಲ್ಲ ಎಂದು ಬೆದರಿಕೆ ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗ್ತಿದೆ.
ಬಾಂಬ್ ಸ್ಪೋಟದ ಬಳಿಕ ಅನೇಕ ಮಕ್ಕಳು ಸಾಯ್ತಾರೆ. ಇನ್ನು ಕೆಲ ಮಕ್ಕಳು ಅಂಗವಿಕಲರಾಗೋದನ್ನ ಪೋಷಕರು ನೋಡ್ಬೇಕು. ಇದನ್ನು ನೋಡಿ ನಾನು ಖುಷಿ ಪಡ್ತೀನಿ ಎಂದು ಬೆದರಿಕೆ ಸಂದೇಶದಲ್ಲಿ ಬರೆಯಲಾಗಿದೆ ಎನ್ನಲಾಗ್ತಿದೆ.