Bomb Threat: ದೆಹಲಿಯ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ: ಪೊಲೀಸರಿಂದ ಪರಿಶೀಲನೆ

0
Spread the love

ನವದೆಹಲಿ: ಕೆಲವೇ ದಿನಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಶಾಲೆಗಳಿಗೆ ಬಾಂಬ್ ಸ್ಫೋಟದ ಬೆದರಿಕೆಗಳು ಬಂದಿದ್ದವು. ಶಾಲೆಗಳಲ್ಲದೆ, ಅನೇಕ ಶಾಪಿಂಗ್ ಮಾಲ್‌ಗಳಿಗೂ ಇಂತಹ ಬೆದರಿಕೆಗಳು ಕಳೆದ ಬಾರಿ ಬಂದಿದ್ದವು. ಇದೀಗ ಮತ್ತೆ ದೆಹಲಿಯ ಅನೇಕ ಶಾಲೆಗಳಿಗೆ ಬಾಂಬ್​​ ಬೆದರಿಕೆ ಇಮೇಲ್​ ಸಂದೇಶಗಳು ಬಂದಿದ್ದು, ಇದು ದೆಹಲಿ ಜನರ ಆತಂಕಕ್ಕೆ ಕಾರಣವಾಯಿತು.

Advertisement

ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸ್​ ಮತ್ತು ಅಗ್ನಿ ಶಾಮಕದಳದ ಅಧಿಕಾರಿಗಳು ಭದ್ರತಾ ಕ್ರಮಕ್ಕೆ ಮುಂದಾಗಿದ್ದು, ತನಿಖೆ ಕೈಗೊಂಡಿದ್ದಾರೆ. ಉತ್ತರ ಕೈಲಾಶ್​ನಲ್ಲಿರುವ ಡಿಪಿಎಸ್​, ಸಲ್ವಾನ್​, ಮಾರ್ಡನ್​ ಮತ್ತು ಕೇಂಬ್ರಿಡ್ಜ್​ ಶಾಲೆಗಳಿಗೆ ಬೆದರಿಕೆ ಕರೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ಆರಂಭಿಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here