ಕಲಬುರಗಿ ನಗರದಲ್ಲಿ ಪ್ರತಿಷ್ಟಿತ ಶಾಲೆಗೆ ಬಾಂಬ್ ಬೆದರಿಕೆ: ಪೊಲೀಸರಿಂದ ಪರಿಶೀಲನೆ

0
Spread the love

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಬಾಂಬ್‌‌ ಬೆದರಿಕೆ ಕರೆಗಳು ದೇಶದಲ್ಲಿ ಹೆಚ್ಚುತ್ತಲೇ ಇದೆ. ಯಾವಾಗಲೂ ಹೋಟೆಲ್‌‌, ಏರ್‌‌ಪೋರ್ಟ್‌, ಶಾಲೆಗಳಿಗೆ ಅನುಮಾನಸ್ಪದವಾಗಿ ಬಾಂಬ್‌‌ ಬೆದರಿಕೆ ಕರೆಗಳು ಬರುತ್ತಲೇ ಇದೆ. ಇನ್ನು ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೂ ಈ ಬಾಂಬರ್‌ಗಳ ಕಣ್ಣು ಬಿದ್ದಿತ್ತು. ಆದ್ರೆ ಈ ಮಧ್ಯೆ ಬಾಂಬರ್‌‌ಗಳ ಕಣ್ಣು ರಾಜ್ಯಕ್ಕೂ ಬಿದ್ದಿದೆ.

Advertisement

ಇದೀಗ ಕಲಬುರಗಿಯ ಕರುಣೇಶ್ವರ ನಗರದಲ್ಲಿರುವ ಚಂದ್ರಕಾಂತ ಪಾಟೀಲ್ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಮಧ್ಯಾಹ್ನ 1 ಗಂಟೆಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಶಾಲಾ ಸಿಬ್ಬಂದಿ ತಕ್ಷಣ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದರು.ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದಾರೆ. ಬೆದರಿಕೆ ಇಮೇಲ್ ತಮಿಳುನಾಡಿನಿಂದ ಬಂದಿದೆ ಎಂದು ಶಂಕಿಸಲಾಗಿದೆ.

 


Spread the love

LEAVE A REPLY

Please enter your comment!
Please enter your name here