ಬೆಂಗಳೂರಿನ ಖಾಸಗಿ ಹೋಟೆಲ್ʼಗೆ ಬಾಂಬ್ ಬೆದರಿಕೆ: ಪೊಲೀಸರಿಂದ ಪರಿಶೀಲನೆ

0
Spread the love

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಾಂಬ್ ಬೆದರಿಕೆಯ ಕರೆಗಳು ಬರುತ್ತಿರುವುದು ಪೊಲೀಸರು ಮತ್ತು ಜನ ಸಾಮಾನ್ಯರನ್ನು ಆತಂಕಕ್ಕೀಡು ಮಾಡಿದೆ. ಪ್ರತಿಷ್ಠಿತ  ಖಾಸಗಿ ಹೊಟೇಲ್ ಗೆ ಬಾಂಬ್ ಇಟ್ಟಿರುವುದಾಗಿ  ಬೆದರಿಕೆ ಇ-ಮೇಲ್ ಬಂದಿದೆ. ಹೈಗ್ರೌಂಡ್ಸ್ ಪೊಲೀಸ್‌ ಠಾಣೆ ವ್ಯಾಪ್ತಿಯ ಹೊಟೇಲ್ ಇದಾಗಿದ್ದು, ತಕ್ಷಣ ಪೊಲೀಸರು ಎಚ್ಚೆತ್ತು ಶೋಧ ಕಾರ್ಯ ನಡೆಸುತ್ತಿದ್ದಾರೆ.

Advertisement

ನಗರದ ತಾಜ್ ವೆಸ್ಟೆಂಡ್ ಹೋಟೆಲ್ ಗೆ ಇ ಮೇಲ್ ಮೂಲಕ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ. ಇದು ನಗರದ ಲಕ್ಷುರಿ ಹೊಟೇಲ್‌ ಗಳಲ್ಲಿ ಒಂದಾಗಿದ್ದು, ರಾಜಕಾರಣಿಗಳು, ಕ್ರಿಕೆಟರ್ ಗಳು, ಸಿನೆಮಾ ತಾರೆಯರು ಆಗಾಗ ವಾಸ್ತವ್ಯ ಹೂಡುವ ಪ್ರತಿಷ್ಠಿತ ಹೋಟೆಲ್ ಆಗಿದೆ. ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು, ಬಾಂಬ್ ಸ್ಕ್ವಾಡ್  ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here