ಶಾರುಖ್‌ ಖಾನ್‌ ನಿರ್ಮಾಣದ ರೆಡಿ ಚಿಲ್ಲೀಸ್ ಮೃತ ಉದ್ಯೋಗಿ ಕುಟುಂಬಕ್ಕೆ 62 ಲಕ್ಷ ಪರಿಹಾರ ಘೋಷಿಸಿದ ಬಾಂಬೆ ಹೈಕೋರ್ಟ್

0
Spread the love

ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್ ಖಾನ್ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್‌ನ ಮಾಜಿ ಆನಿಮೇಟರ್ ಚಾರು ಖಂಡಲ್ ಅವರ ಕುಟುಂಬಕ್ಕೆ 62.2 ಲಕ್ಷ ರೂಪಾಯಿಗಳ ಪರಿಹಾರ  ನೀಡುವಂತೆ ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿದೆ.

Advertisement

28 ವರ್ಷದ ಖಂಡಲ್, 2012 ರ ರಸ್ತೆ ಅಪಘಾತದಲ್ಲಿ ಬೆನ್ನುಮೂಳೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಸುಮಾರು ಐದು ವರ್ಷಗಳ ನಂತರ, 2017 ರಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿ ಮೃತಪಟ್ಟಿದ್ದರು. ಆರಂಭದಲ್ಲಿ ಪರಿಹಾರವನ್ನು ನವೆಂಬರ್ 2020 ರಲ್ಲಿ ಮುಂಬೈನ ಮೋಟಾರು ಅಪಘಾತ ಕ್ಲೈಮ್ ಟ್ರಿಬ್ಯೂನಲ್ ನೀಡಿತು. ಆದಾಗ್ಯೂ, ಇದರಲ್ಲಿ ಭಾಗಿಯಾಗಿರುವ ವಿಮಾ ಕಂಪನಿ – ಚೋಳಮಂಡಲಂ ಎಂಎಸ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ – ನ್ಯಾಯಮಂಡಳಿಯ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಮೇ 9 ರಂದು ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ಅದ್ವೈತ್ ಸೇತ್ನಾ ಅವರ ವಿಭಾಗೀಯ ಪೀಠವು ವಿಮಾದಾರರ ಮೇಲ್ಮನವಿಯನ್ನು ವಜಾಗೊಳಿಸಿತು ಮತ್ತು ಪ್ರಕರಣದ ದುರಂತ ಸಂದರ್ಭಗಳನ್ನು ಗಮನಿಸಿದರೆ ಪರಿಹಾರವನ್ನು ‘ನ್ಯಾಯಯುತ ಮತ್ತು ಸಮಂಜಸ’ ಎಂದು ತಿಳಿಸಿತ್ತು.

ಪೂರ್ಣ ಪರಿಹಾರ ಸಾಧ್ಯವಿಲ್ಲ, ಆದರೆ ನ್ಯಾಯಯುತ ಪರಿಹಾರ ರೂಢಿಯಾಗಿರಬೇಕು. ಪ್ರತಿಯೊಂದು ಪ್ರಕರಣವನ್ನು ಅದರ ಸಂಗತಿಗಳ ಆಧಾರದ ಮೇಲೆ ನಿರ್ಧರಿಸಬೇಕು ಎಂದು ಪೀಠವು ಹೇಳಿದೆ.

ಲಾ ಟ್ರೆಂಡ್ ಪ್ರಕಾರ, ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ಅದ್ವೈತ್ ಸೇಥ್ನಾ ಅವರ ವಿಭಾಗೀಯ ಪೀಠವು, ನವೆಂಬರ್ 2020 ರ ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿ ಚೋಳಮಂಡಲಂ ಎಂಎಸ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಅಪಘಾತದ ವರ್ಷಗಳ ನಂತರ ಆಕೆಯ ಸಾವು ಸಂಭವಿಸಿದೆ ಮತ್ತು ಗಾಯಗಳಿಗೆ ನೇರ ಸಂಬಂಧವಿಲ್ಲ ಎಂದು ವಿಮಾ ಕಂಪನಿ ವಾದಿಸಿತು. ಆದಾಗ್ಯೂ, ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸಿದೆ

ಘಟನೆ ಹಿನ್ನೆಲೆ: ಮಾರ್ಚ್ 25, 2012 ರಂದು ಮುಂಬೈನಲ್ಲಿ ಖಂಡಲ್ ಅವರು ಕುಳಿತಿರುವ ಆಟೋರಿಕ್ಷಾಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತು. ಖಂಡಲ್ ಅವರ ಬೆನ್ನುಹುರಿಗೆ ಗಂಭೀರ ಗಾಯಗಳಾಗಿ, ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಯಿತು. ಖಂಡಲ್‌‌ ಬದುಕುಳಿದರೂ ಜನವರಿ 17, 2017 ರಂದು ಸಾಯುವವರೆಗೂ ಹಾಸಿಗೆ ಹಿಡಿದಿದ್ದರು.  ಚಿಕಿತ್ಸೆ ಮತ್ತು ದೀರ್ಘಕಾಲೀನ ಆರೈಕೆಗಾಗಿ ಅವರ ಕುಟುಂಬವು 20 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


Spread the love

LEAVE A REPLY

Please enter your comment!
Please enter your name here