ಜು. 6ರಂದು ‘ಕಾಲಿಗೆ ಗಾಲಿ ಕಟ್ಟಿಕೊಂಡು’ ಪುಸ್ತಕ ಬಿಡುಗಡೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಿವೃತ್ತ ಉಪನ್ಯಾಸಕ, ಹಿರಿಯ ಸಾಹಿತಿ ರಾಜೂರ(ಗಜೇಂದ್ರಗಡ)ದ ಡಾ. ಮಲ್ಲಿಕಾರ್ಜುನ ಕುಂಬಾರ ಅವರ ‘ಕಾಲಿಗೆ ಗಾಲಿ ಕಟ್ಟಿಕೊಂಡು’ ಪ್ರವಾಸ ಕಥನಗಳ ಪುಸ್ತಕ ಜು. 6ರಂದು ಮುಂಜಾನೆ 10.30 ಗಂಟೆಗೆ ನಗರದ ಗದಗ ರೆಸ್ಟೋರೆಂಟ್ ಸಭಾಂಗಣದಲ್ಲಿ ಗೆಳೆಯರ ಬಳಗದಿಂದ ಬಿಡುಗಡೆಗೊಳ್ಳಲಿದೆ.

Advertisement

ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ ಪುಸ್ತಕ ಬಿಡುಗಡೆ ಮಾಡುವರು. ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ವಹಿಸುವರು. ಮುಖ್ಯ ಅತಿಥಿಗಳಾಗಿ ಸಾಂಸ್ಕೃತಿಕ ಚಿಂತಕರಾದ ಶಿವನಗೌಡ ಗೌಡರ, ಶಶಿಧರ ಮಂಗಳೂರ ಹಾಗೂ ಸಾಹಿತಿ ಐ.ಕೆ. ಕಮ್ಮಾರ ಆಗಮಿಸುವರು. ಗ್ರಂಥಕರ್ತರಾದ ಡಾ. ಮಲ್ಲಿಕಾರ್ಜುನ ಕುಂಬಾರ ಉಪಸ್ಥಿತರಿರುವರು ಎಂದು ಗೆಳೆಯರ ಬಳಗದ ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here