ವಿಜಯಸಾಕ್ಷಿ ಸುದ್ದಿ, ಗದಗ: ರಾಯಲ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಂಸ್ಥಾಪಕರಾದ ದಿವಂಗತ ಎಂ.ಎಂ. ಢಾಲಾಯತ ಗುರುಗಳ ಜೀವನಗಾಥೆ ಕುರಿತಂತೆ ಅವರ ಕೌಟುಂಬಿಕ ಹಿನ್ನೆಲೆ, ಬಾಲ್ಯಜೀವನ, ವಿದ್ಯಾಭ್ಯಾಸ, ವೃತ್ತಿ ಜೀವನ, ಶಿಕ್ಷಕರ ವೃತ್ತಿ ಆರಂಭ, ಎಂ.ಎಂ ಢಾಲಾಯತ ಗುರುಗಳು ಜನರಿಗೆ ನೀಡಿದ ಆರ್ಥಿಕ ನೆರವು ಹಾಗೂ ಸಮಾಜಸೇವೆಯನ್ನು ಒಳಗೊಂಡ ಒಂದು ಅದ್ಭುತ ಸಾರ್ಥಕ ಜೀವನದ ಕಥೆಯನ್ನು ಒಳಗೊಂಡ ‘ಸಾಧನೆಯ ಮೌನ ಶಿಲ್ಪಿ’ ಪುಸ್ತಕವನ್ನು ಡಿ.ಎಸ್.ಪಿ ಮುರ್ತುಜಾ ಖಾದ್ರಿ ಲೋಕಾರ್ಪಣೆಗೊಳಿಸಿದರು.
ಪುಸ್ತಕ ಬಿಡುಗಡೆ ಮಾಡುವ ಸಮಾರಂಭವನ್ನು ಸಹಶಿಕ್ಷಕ ಎಸ್.ವಿ. ಅಂಗಡಿ ನಡೆಸಿಕೊಟ್ಟರು. ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾದ ಡಾ. ಪರಶುರಾಮ ಗುಡಿಮನಿ, ಶಾಲೆಯ ಅಧ್ಯಕ್ಷರಾದ ಎ.ಎಂ. ಢಾಲಾಯತ, ಮುಖ್ಯೋಪಾಧ್ಯಾಯ ಎಸ್.ಎಸ್. ಕುಂಬಾರ, ಸಹ ಶಿಕ್ಷಕರಾದ ಸಿ.ಎಚ್. ಕೊಪ್ಪಳ, ಸಹ ಶಿಕ್ಷಕರಾದ ಎಂ.ವಿ. ಫಿರಂಗಿ, ಸಾಹಿರಾಬಾನು ಢಾಲಾಯತ, ಮಮತಾಜ ಬೇಗಂ ಢಾಲಾಯತ, ಮಂಜುಳಾ ಉಮಚಗಿ, ಜಾಫರ ಖಾಜಿ, ಜೆ.ಜೆ. ಡಂಬಳ, ಕರೀಮ ಸುಣಗಾರ ಉಪಸ್ಥಿತರಿದ್ದರು.



