ಬೆಂಗಳೂರು: ಊಟದ ವಿಚಾರಕ್ಕೆ ಬೋರ್ವೆಲ್ ಲಾರಿ ಚಾಲಕ, ಆಪರೇಟರ್ನನ್ನು ಕೊಲೆ ಮಾಡಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ AEPS ಲೇಔಟ್ನಲ್ಲಿ ಘಟನೆ ನಡೆದಿದ್ದು, ತಮಿಳುನಾಡಿನ ತಿರುಚ್ಚಿಯ ಸುರೇಶ್ ಕೊಲೆ ದುರ್ದೈವಿ.
ಈತ ನಿನ್ನೆ ಬೋರ್ವೆಲ್ ಕೊರೆಯಲು AEPS ಲೇಔಟ್ಗೆ ಬಂದಿದ್ದ. ಜತೆಗೆ ಉತ್ತರ ಭಾರತದ ಐದಾರು ಕಾರ್ಮಿಕರನ್ನ ಕರೆತಂದಿದ್ದ. ಸುರೇಶ್ ಸರಿಯಾಗಿ ಊಟ ಕೊಡಿಸುವುದಿಲ್ಲವೆಂದು ಮನಸ್ತಾಪವಿತ್ತಂತೆ. ಹಾಗಾಗಿ ಜೊತೆಗಿದ್ದವರೇ ಕೊಲೆ ಮಾಡಿರುವ ಅನುಮಾನವಿದೆ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.



