ಕೊಪ್ಪಳ: ತುಂಗಭದ್ರಾ ಜಲಾಶಯ ಮತ್ತೆ ತುಂಬಿದೆ. ಮುಂಗಾರು ಮತ್ತು ಹಿಂಗಾರು ಎರಡು ಬೆಳೆಗೆ ನೀರು ಸಿಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯ ಮತ್ತೆ ತುಂಬಿದೆ. ಮುಂಗಾರು ಮತ್ತು ಹಿಂಗಾರು ಎರಡು ಬೆಳೆಗೆ ನೀರು ಸಿಗುತ್ತದೆ. ಗೇಟ್ ದುರಸ್ತಿ ಕೆಲಸವನ್ನು ಬಹಳ ಜಾಗೃತಿಯಿಂದ ಮಾಡಲಾಗಿತ್ತು/ ಎಲ್ಲರ ಶ್ರಮದಿಂದ 20 ಕ್ಕೂ ಹೆಚ್ಚು ಟಿಎಂಸಿ ನೀರು ಉಳದಿದೆ.
Advertisement
ಮಳೆರಾಯನಿಗೆ ಸರ್ಕಾರದ ಪರವಾಗಿ ಧನ್ಯವಾದಗಳನ್ನು ಹೇಳುತ್ತೇನೆ. ಎರಡನೇ ಬೆಳೆಗೆ ನೀರು ಕೊಡಲಿಕ್ಕೆ ಸಾಧ್ಯವಾಗಬಹುದು. ತುಂಗಭದ್ರಾ ಜಲಾಶಯ 70 ವರ್ಷದ ಡ್ಯಾಂ ಇದೆ. ಐವತ್ತು ವರ್ಷಕ್ಕೆ ಗೇಟ್ ಬದಲಾವಣೆ ಮಾಡಬೇಕು ಅನ್ನೋ ನಿಯಮವಿದೆ. ತಜ್ಞರ ಕಮಿಟಿ ಮಾಡಲಾಗಿದೆ. ಅವರು ವರದಿ ನೀಡಿದ್ದಾರೆ. ಅವರ ವರದಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.