ನಾವು ಹೊರಗಡೆ ತಿರುಗಾಡುವಾಗ ವಿಪರೀತ ಬಾಯಾರಿಕೆ ಅನಿಸಿದಾಗ ತಕ್ಷಣ ವಾಟರ್ ಬಾಟಲ್ ಕೊಂಡುಕೊಂಡು ಬಿಡುತ್ತೇವೆ. ಆದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ನಂಬಿ ನಾವು ಕುಡಿಯುವ ಆ ನೀರು ಇದೆಯೆಲ್ಲಾ? ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬಾಟಲಿ ನೀರು ಶುದ್ಧವಾಗಿರುತ್ತದೆ, ಯಾವುದೇ ರಾಸಾಯನಿಕಗಳಿರುವುದಿಲ್ಲ ಎಂಬ ನಂಬಿಕೆ ಜನರಲ್ಲಿ ಇದೆ. ಆದರೆ ಇದು ಸುಳ್ಳು ಎಂದು ವರದಿಯೊಂದು ಹೇಳಿದೆ.
ಕ್ಲಾಸಿಫೈ ಪ್ಯಾಕೇಜ್ಡ್ ಹಾಗೂ ಮಿನರಲ್ ವಾಟರ್ ಅತೀ ಅಪಾಯಕಾರಿ ಆಹಾರಗಳ ಗುಂಪಿಗೆ ಸೇರಿಸಲಾಗಿದೆ. ಇದರಿಂದಾಗಿ ಈ ಬಗೆಯು ಉತ್ಪನ್ನಗಳು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಥರ್ಡ್ ಪಾರ್ಟಿಯಿಂದ ಆಡಿಟ್ಗೆ ಒಳಗಾಗಲಿವೆ ಎಂದು FSSAI ಹೇಳಿದೆ.
ಸರ್ಕಾರದ ನಿರ್ಧಾರದಂತೆ ಈ ಪ್ರಾಡಕ್ಟ್ಗಳಿಗೆ ನೀಡಲಾಗಿರುವ ಬಿಎಸ್ಐ ಸರ್ಟಿಫಿಕೆಟ್ನ್ನು ತೆಗೆದುಹಾಕುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ.ಹೊಸ ನಿಯಮದ ಪ್ರಕಾರ ಪ್ಯಾಕ್ ಆಗಿರುವ ಕುಡಿಯುವ ಹಾಗೂ ಮಿನರಲ್ ವಾಟರ್ ಉತ್ಪಾದಕರು ಪ್ರತಿವರ್ಷ ಪರಿಶೀಲನೆಯ ಸಮಸ್ಯೆಯನ್ನು ಎದುರಿಸಲಿದ್ದಾರೆ.
ಈ ಎಲ್ಲಾ ಪರಿಶೀಲನೆಗಳು ನಡೆದ ಬಳಿಕವೇ ಉತ್ಪಾದಕ ಕಂಪನಿಗಳಿಗೆ ಪರವಾನಿಗೆ ಪತ್ರ ಹಾಗೂ ನೊಂದಣಿ ಪತ್ರ ಸಿಗಲಿದೆ. ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಆದೇಶದ ಪ್ರಕಾರ ಅತಿ ಅಪಾಯಕಾರಿ ಆಹಾರ ಪದಾರ್ಥಗಳು ಉದಾಹರಣೆಗೆ ಪ್ಯಾಕ್ ಆದ ಕುಡಿಯುವ ನೀರು ಸೇರಿ ಎಲ್ಲ ಉತ್ಪನ್ನಗಳು ಇನ್ಮುಂದೆ ಆಹಾರ ಸುರಕ್ಷತಾ ಎಜೆನ್ಸಿಗಳ ಥರ್ಡ್ ಪಾರ್ಟಿ ಅಡಿಯಲ್ಲಿಯೆ ಆಡಿಟ್ಗೆ ಒಳಗಾಗಲಿವೆ.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ಸುರಕ್ಷತೆಯ ಆಹಾರವನ್ನು ಪೂರೈಸುವ ಗುರಿಯನ್ನಿಟ್ಟುಕೊಂಡು ಈ ನಿರ್ಣಯಕ್ಕೆ ಬರಲಾಗಿದೆ ಎಂದು ಎಫ್ಎಸ್ಎಸ್ಎಐ ಹೇಳಿದೆ.