ಮಂಗಳೂರು:- ಕಾಡುಹಂದಿ ಬೇಟೆಗೆ ಆಡಲು ಇಟ್ಟಿದ್ದ ನಾಡಬಾಂಬ್ ಅನ್ನು ಬಾಲ್ ಎಂದು ತಿಳಿದು ಬಾಲಕರಿಬ್ಬರು ಅದರಲ್ಲಿ ಕ್ರಿಕೆಟ್ ಆಡಿದ್ದು, ಈ ವೇಳೆ ಬಾಂಬ್ ಸ್ಫೋಟಗೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ಜರುಗಿದೆ.
ಓರ್ವ ಬಾಲಕ ಸ್ಫೋಟದಲ್ಲಿ ಗಾಯಗೊಂಡಿದ್ದಾನೆ. ಗಾಯಗೊಂಡ ಬಾಲಕನನ್ನು ಅಭೀಶ್ ಎಂದು ಗುರುತಿಸಲಾಗಿದೆ. ಬಾಲಕನಿಗೆ ಸರ್ಕಾರಿ ಆಸ್ಪ್ರತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಅಭೀಶ್ ಹಾಗೂ ಮತ್ತೊಬ್ಬ ಬಾಲಕ ಮನೆಯ ಮುಂಭಾಗದಲ್ಲಿ ಕ್ರಿಕೆಟ್ ಆಡುವ ವೇಳೆ ಕಾಡುಹಂದಿಗೆ ಇಟ್ಟಿದ್ದ ಬಾಲ್ ತರಹದ ಸ್ಫೋಟಕ ಸಿಕ್ಕಿದೆ. ಅದನ್ನು ಅಭೀಶ್ ಗೆಳೆಯ ಚೆಂಡೆಂದು ತಿಳಿದು ಹಾಕಿದ್ದಾನೆ. ಬ್ಯಾಟ್‌ನಿಂದ ಅದಕ್ಕೆ ಹೊಡೆದಾಗ ಅದು ಸ್ಫೋಟವಾಗಿದೆ. ಸ್ಟೋಟ ಅಷ್ಟೊಂದು ತೀವ್ರತೆ ಇಲ್ಲದ ಕಾರಣ, ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.



