Actress Abhinaya: ದಾಂಪತ್ಯ ಜೀವನಕ್ಕೆ ಕಾಲಿಟ್ಟ “ಹುಡುಗರು” ಸಿನಿಮಾ ನಟಿ ಅಭಿನಯ..!

0
Spread the love

ಕನ್ನಡದ ‘ಹುಡುಗರು’ ಸಿನಿಮಾದಲ್ಲಿ ನಟಿಸಿದ್ದ ವಿಶೇಷ ಚೇತನ ನಟಿ ಅಭಿನಯ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯನ ಜೊತೆ ನಟಿ ಮದುವೆಯಾಗಿದ್ದು, ಇತ್ತೀಚೆಗೆ ವಿಶೇಷ ಚೇತನ ನಟಿ ಅಭಿನಯ ಅವರು ಬಹುಕಾಲದ ಗೆಳೆಯ ವೇಗೇಶನಾ ಕಾರ್ತಿಕ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Advertisement

15 ವರ್ಷಗಳ ಪ್ರೀತಿಗೆ ನಟಿ ಮದುವೆಯ ಮುದ್ರೆ ಒತ್ತಿದ್ದಾರೆ. ಹೈದರಾಬಾದ್‌ನಲ್ಲಿ ಗೆಳೆಯ ವೆಗೆಶನಾ ಕಾರ್ತಿಕ್  ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ನವಜೋಡಿ ಹೊಸ ಬಾಳಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಮಾರ್ಚ್ 9ರಂದು ಗೆಳೆಯ ವೆಗೆಶನಾ ಕಾರ್ತಿಕ್ ಜೊತೆ ಅಭಿನಯ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.

ಆದರೆ ಹುಡುಗನ ಹಿನ್ನೆಲೆ ಮತ್ತು ಮದುವೆ ಯಾವಾಗ ಎಂದು ರಿವೀಲ್ ಮಾಡಿರಲಿಲ್ಲ. ಈಗ ನಟಿಯ ಮದುವೆ ಸುದ್ದಿ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ನಟಿ ಅಭಿನಯಗೆ ಮಾತು ಬರಲ್ಲ, ಕಿವಿನೂ ಕೇಳಲ್ಲ. ಆದರೆ ನಟನೆಯಲ್ಲಿ ಮಾತ್ರ ಅದ್ಭುತ ಪ್ರತಿಭೆ. ಕನ್ನಡ, ತಮಿಳು, ತೆಲುಗು, ಮಲಯಾಳಂನ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿ ಖ್ಯಾತಿ ಪಡೆದಿದ್ದಾರೆ.


Spread the love

LEAVE A REPLY

Please enter your comment!
Please enter your name here