ಹೆಸರಿಗೆ, ಜಾಹಿರಾತಿಗೆ ಮಾತ್ರ ಬ್ರ್ಯಾಂಡ್ ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವ್ಯಂಗ್ಯ!

0
Spread the love

ಬೆಂಗಳೂರು:- ಕೇವಲ ಹೆಸರು ಮತ್ತು ಜಾಹೀರಾತಿಗೆ ಮಾತ್ರ ಬ್ರ್ಯಾಂಡ್ ಬೆಂಗಳೂರು ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.

Advertisement

ಈ ಕುರಿತು ಟ್ವೀಟ್​ ಮಾಡಿರುವ ಬಿಜೆಪಿ, ‘ಗುತ್ತಿಗೆದಾರರಿಗೆ ಬಾಕಿ ಬಿಲ್‌ಗಳನ್ನು ಪಾವತಿಸಲು ಯೋಗ್ಯತೆಯಿಲ್ಲದ ಕಾಂಗ್ರೆಸ್​​ ಸರ್ಕಾರ, ಬೆಂಗಳೂರನ್ನು ಬ್ರಾಂಡ್‌ ಬೆಂಗಳೂರನ್ನಾಗಿಸುತ್ತದೆ ಎನ್ನುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದಾರೆ.

ಬ್ರಾಂಡ್‌ ಬೆಂಗಳೂರು ಕೇವಲ ಹೆಸರಿಗೆ ಮತ್ತು ಜಾಹೀರಾತಿಗೆ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಗುತ್ತಿಗೆದಾರರಿಗೆ ಬಾಕಿ ಬಿಲ್‌ಗಳನ್ನು ಪಾವತಿಸಲು ಯೋಗ್ಯತೆಯಿಲ್ಲದ ಸರ್ಕಾರ, ಬೆಂಗಳೂರನ್ನು ಬ್ರಾಂಡ್‌ ಬೆಂಗಳೂರನ್ನಾಗಿಸುತ್ತದೆ ಎನ್ನುವುದು ಹಾಸ್ಯಾಸ್ಪದ. ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಾಕಿ ಬಿಲ್‌ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರರು ಮುಷ್ಕರಕ್ಕೆ ಇಳಿಯುತ್ತಿರುವುದು ಇದು ಎರಡನೇ ಬಾರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಷ್ಟೇಅಲ್ಲ, ಭ್ರಷ್ಟ ಕಾಂಗ್ರೆಸ್​ ಸರ್ಕಾರದ ದುರಾಡಳಿತದಿಂದ ಶಿಕ್ಷಣ ಇಲಾಖೆ ಅಧೋಗತಿ ತಲುಪಿದ್ದು, ರಾಜ್ಯಾದ್ಯಂತ 3,819 ಶಾಲಾ ಕಟ್ಟಡಗಳು ಶಿಥಿಲಾವಸ್ಥೆಗೊಂಡು, ಕುಸಿಯಲು ಕ್ಷಣಗಣನೇ ಎಣಿಸುತ್ತಿವೆ. ಕೈಲಾಗದ ಸರ್ಕಾರ ಸಂವೇದನೆ, ದೂರದೃಷ್ಟಿ ಕಳೆದುಕೊಂಡ ಪರಿಣಾಮ ಮಳೆಗಾಲದಲ್ಲಿ ಶಾಲಾ ಕೊಠಡಿಗಳ ಪರಿಸ್ಥಿತಿ ಹೇಳತಿರದಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ದಿವ್ಯ ನಿರ್ಲಕ್ಷ್ಯದಿಂದ ಮಕ್ಕಳು ಜೀವಭಯದಲ್ಲಿ ಪಾಠ ಕೇಳಬೇಕಾಗಿದೆ.

ಸಿಎಂ ತವರು ಜಿಲ್ಲೆಯಲ್ಲಿ 21, ಶಿಕ್ಷಣ ಸಚಿವರ ಜಿಲ್ಲೆಯಲ್ಲಿ 274 ಕೊಠಡಿಗಳು ದುಸ್ಥಿತಿಯಲ್ಲಿರುವುದು ದುರಂತ. ಸಿಎಂ ಸಿದ್ದರಾಮಯ್ಯನವರೇ, ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಕಿಡಿಕಾರಿದೆ.


Spread the love

LEAVE A REPLY

Please enter your comment!
Please enter your name here