ದೇವಸ್ಥಾನದ ಪೂಜಾರಿಕೆ ವಿಚಾರವಾಗಿ ಮಾರಾಮಾರಿ: ಕಲ್ಲು, ದೊಣ್ಣೆಗಳಿಂದ ಬಡಿದಾಟ!

0
Spread the love

ಹೊಸದುರ್ಗ:- ದೇವಸ್ಥಾನದ ಪೂಜಾರಿಕೆ ವಿಚಾರವಾಗಿ ಕಲ್ಲು, ದೊಣ್ಣೆಗಳಿಂದ ಎರಡು ಗುಂಪುಗಳ‌ು ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಹೊಸದುರ್ಗ ತಾಲೂಕಿನ ಅಜ್ಜಯ್ಯನಹಟ್ಟಿ ಗೊಲ್ಲರಹಟ್ಟಿ ಯಲ್ಲಿ ಜರುಗಿದೆ.

Advertisement

ಘಟನೆಯಲ್ಲಿ 8 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಅಜ್ಜಯ್ಯನಹಟ್ಟಿ ಗೊಲ್ಲರಹಟ್ಟಿಯ ವೀರಮಾರಣ್ಣ ದೇವಸ್ಥಾನ ಪೂಜಾರಿಕೆ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಈ ಮಾರಾಮಾರಿ ನಡೆದಿರುವುದಾಗಿ ತಿಳಿದು ಬಂದಿದೆ.

ಗಾಯಾಳುಗಳಿಗೆ ಕಿತ್ತಳ ಕಂಚಿಪುರ ಹಾಗೂ ಹೊಸದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here