ಬೆಂಗಳೂರು ಗ್ರಾಮಾಂತರ:- ನಟ ಹಾಗೂ ನಿರ್ದೇಶಕ ಪ್ರಥಮ್ ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ.
ಎಸ್, ನಟ ಬಿಗ್ಬಾಸ್ ಪ್ರಥಮ್ ಅವರು ಇತ್ತೀಚೆಗೆ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡಿ, ನಟಿ ರಮ್ಯಾಗೆ ಸಪೋರ್ಟ್ ಮಾಡಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ನಟ ಇತ್ತೀಚೆಗೆ ದರ್ಶನ್ ಅಭಿಮಾನಿಗಳ ವಿರುದ್ಧ ಹರಿಹಾಯ್ದಾಗ ತಮ್ಮ ಮೇಲೆ ನಡೆದಂತಹ ಒಂದು ದಾಳಿ ಘಟನೆಯ ಬಗ್ಗೆಯೂ ಮಾತನಾಡಿದ್ದರು. ಇದರ ವಿಚಾರಣೆ ಕೂಡ ನಡೆಯುತ್ತಿದೆ.
ಈ ಹೊತ್ತಲ್ಲೇ ಪ್ರಥಮ್ ಮುಖಕ್ಕೆ ಮಸಿ ಬಳಿಯಲು ದಲಿತ ಮುಖಂಡರು ಯತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಜರುಗಿದೆ. ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಎಂದು ನಟನ ಮುಖಕ್ಕೆ ಮಸಿ ಬಳಿಯಲು ಯತ್ನಿಸಲಾಗಿದೆ. ವಿಚಾರಣೆ ಮುಗಿಸಿ ವಾಪಸ್ ಹೊರಡುವ ವೇಳೆ ಪೋಲೀಸ್ ಠಾಣೆಯ ಮುಂದೆಯೇ ಮಸಿ ಬಳಿಯಲು ದಲಿತ ಮುಖಂಡರು ಯತ್ನಿಸಿದ್ದಾರೆ.
ಅಲ್ಲದೇ ಪ್ರಥಮ್ ಗೆ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಒಟ್ಟಾರೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆ ಮುಂದೆ ಹೈಡ್ರಾಮವೇ ನಡೆದಿದೆ.