ಹಾಸನ:- ಕಳ್ಳರ ಪತ್ತೆಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳನ್ನೇ ಖದೀಮನೋರ್ವ ಹೊತ್ತೊಯ್ದಿರುವ ಘಟನೆ ಹಾಸನದಲ್ಲಿ ಜರುಗಿದೆ.
Advertisement
ಹಾಸನದ ಹೊಳೆನರಸೀಪುರ ಪೇಟೆ ಬೀದಿಯಲ್ಲಿ ಪೊಲೀಸರ ಸೂಚನೆಯ ಮೇರೆಗೆ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ 3 ಸಿಸಿ ಕ್ಯಾಮೆರಾವನ್ನು ಕಳ್ಳನೊಬ್ಬ ಕದ್ದಿದ್ದಾನೆ. ನಮ್ಮ ಸೇಫ್ಟಿಗಾಗಿ ನಾವು ಅಳವಡಿಸಿದ ಕ್ಯಾಮೆರಾಗಳನ್ನೇ ಕದ್ದರೆ ಏನು ಕಥೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಎಲ್ಲಾ ವರ್ತಕರು ಹಾಗೂ ಮನೆಯವರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಡಿ ಎಂದು ಸ್ಥಳೀಯರೊಬ್ಬರು ಕೇಳಿಕೊಂಡಿದ್ದಾರೆ.
ಕಳ್ಳತನ, ಅಪರಾಧಗಳನ್ನು ತಡೆಯುವುದು ಮತ್ತು ಅವುಗಳನ್ನು ದಾಖಲಿಸುವ ಸಲುವಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತಾರೆ. ಆದರೆ ಇದೀಗ ಅದೇ ಕ್ಯಾಮೆರಾ ಕಳ್ಳತನ ಆಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡಿದೆ.