BREAKING NEWS- ಗದಗನ ನಾಲ್ವರ ಹತ್ಯೆ ಪ್ರಕರಣ: ಬಿಜೆಪಿ ಮುಖಂಡನ ಪುತ್ರ ಸೇರಿ ಎಂಟು ಸುಪಾರಿ ಕಿಲ್ಲರ್ಸ್‌ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕಳೆದ ಶುಕ್ರವಾರ ಬೆಳಗಿನ ಜಾವ ನಡೆದಿದ್ದ ನಾಲ್ವರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಕಾರ್ಯಾಚರಣೆಗೆ ಇಳಿದಿದ್ದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿನ ಗದಗ ಹೆಚ್ಚುವರಿ ಎಸ್ಪಿ ಎಮ್. ಬಿ. ಸಂಕದ, ಧಾರವಾಡ ಹೆಚ್ಚುವರಿ ಆಯುಕ್ತ ನಾರಾಯಣ ಬರಮನಿ, ಬಾಗಲಕೋಟ ಹೆಚ್ಚುವರಿ ಎಸ್ಪಿ ಹಾಗೂ ಗದಗ ಡಿವೈಎಸ್ಪಿ ಜೆ.ಎಚ್. ಇನಾಮದಾರ ನೇತೃತ್ವದ ಪೊಲೀಸರ ತಂಡ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಗದಗನ ಮುಖ್ಯ ಆರೋಪಿ ವಿನಾಯಕ ಬಾಕಳೆ, ರಾಜೀವ ಗಾಂಧಿ ನಗರದ ಫೈರೋಜ್ ನಿಸಾರ್ ಅಹ್ಮದ ಖಾಜಿ, ಹುಡ್ಕೋ ಕಾಲೋನಿಯ ಜಿಶಾನ್ ತಂದೆ ಮೆಹಬೂಬ್ ಅಲಿ ಖಾಜಿ ಸೇರಿದಂತೆ ಮಹಾರಾಷ್ಟ್ರದ ಮಿರಜ್‌ನ ಸಾಹಿಲ್ ತಂದೆ ಆಸ್ಪಾಕ್ ಖಾಜಿ, ಸೋಹೆಲ್ ತಂದೆ ಆಸ್ಪಾಕ್ ಖಾಜಿ, ಸುಲ್ತಾನ್ ತಂದೆ ಜಿಲಾನಿ ಶೇಖ, ಮಹೇಶ್ ತಂದೆ ಜಗನ್ನಾಥ್ ಸಾಳೋಂಕೆ, ವಾಹಿದ್ ತಂದೆ ಲಿಯಾಕತ್ ಬೇಪಾರಿ ಎಂಬ ಐವರು ಆರೋಪಿಗಳನ್ನು ಹೆಡಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿಜೆಪಿ ಮುಖಂಡ ಪ್ರಕಾಶ್ ಬಾಕಳೆಯ ಹಿರಿಯ ಮಗನೇ (ಮೊದಲನೇ ಪತ್ನಿ ಮಗ) ವಿನಾಯಕ ಪ್ರಕಾಶ್ ಬಾಕಳೆ ಪುತ್ರ ವಿನಾಯಕ, 65 ಲಕ್ಷ ರೂ. ಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಉತ್ತರ ವಲಯದ ಐಜಿಪಿ ವಿಕಾಸ್‌ ಕುಮಾರ್ ವಿಕಾಸ ಅವರು, ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರ ಮೂಲದ ಹಂತಕರು ಹಾಗೂ ಗದುಗಿನ ಇಬ್ಬರು ಸೇರಿ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ, ಕೊಪ್ಪಳದ ಭಾಗ್ಯ ನಗರದ ಪರಶುರಾಮ, ಲಕ್ಷ್ಮೀ ಹಾಗೂ ಆಕಾಂಕ್ಷಾ ಅವರನ್ನು ಹತ್ಯೆ ಮಾಡಿ ಹಂತಕರು ಪರಾರಿಯಾಗಿದ್ದರು.

ಘಟನೆ ನಡೆದು 72 ಗಂಟೆಗಳಲ್ಲಿ ಆರೋಪಿಗಳ‌ನ್ನು ಬಂಧಿಸಿರುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ‌ ಪ್ರಶಂಸೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೇ ಡಿ.ಜಿ ಹಾಗೂ ಐಜಿಪಿ ಅವರು ಪೊಲೀಸರ ಈ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ, 5 ಲಕ್ಷ.ರೂ ಗಳನ್ನು ಬಹುಮಾನ ಘೋಷಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here