Breaking News: ದಾವಣಗೆರೆಯಲ್ಲಿ ಅಮಲು ಸಿರಪ್ ಮಾರಾಟ ಗ್ಯಾಂಗ್ ಪತ್ತೆ

0
Spread the love

ದಾವಣಗೆರೆ: ಕೆಮ್ಮಿನ ಸಿರಪ್ ಮೂಲಕ ಅಮಲು ಉಂಟುಮಾಡುವ ಸಿರಪ್‌ಗಳನ್ನು ಯುವಕರಿಗೆ ಅಕ್ರಮವಾಗಿ ಮಾರುತ್ತಿದ್ದ ಗ್ಯಾಂಗ್‌ನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

Advertisement

ಒಟ್ಟು ಐದು ಜನರನ್ನು ಬಂಧಿಸಿ, ₹1.24 ಲಕ್ಷ ಮೌಲ್ಯದ ಸಿರಪ್ ಬಾಟಲ್‌ಗಳು ಮತ್ತು ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ. ನಗರದ ದೇವರಾಜ ಅರಸ್ ಬಡಾವಣೆಯ ಬಳಿ ಸಿರಪ್ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಅವರನ್ನು ಪತ್ತೆಹಚ್ಚಿದರು. ಬಂಧಿತರ ಹೆಸರುಗಳು ಶಿವಕುಮಾರ್, ಅಜಿಮುದ್ದೀನ್, ಮಹಮದ್ ಶಾರೀಕ್, ಸೈಯದ್ ಬಾಬು ಅಲಿಯಾಸ್ ಯೂನೂಸ್ ಮತ್ತು ಅಬ್ದುಲ್ ಗಫರ್.

ಬಂಧಿತರಿಂದ 340 ಬ್ರಾಂಕೊಫ್-ಸಿ ಸಿರಪ್ ಬಾಟಲ್‌ಗಳು, 15 ಎಡೆಕ್ಸ್ ಸಿಡಿ ಸಿರಪ್‌ಗಳು, ಕೆಲವು ಮಾತ್ರೆಗಳು ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು, ವೈದ್ಯರ ಸಲಹೆ ಇಲ್ಲದೆ ಸಿರಪ್ ಮಾರಾಟ ಮಾಡುವ ಮೆಡಿಕಲ್ ಅಂಗಡಿಗಳ ಮೇಲೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here