ಬಳ್ಳಾರಿ:- ಬಳ್ಳಾರಿ ನಗರದ ಎಸ್ ಬಿಐನಲ್ಲಿ ದರೋಡೆ ಆಗಿದೆ. ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿ ಇರುವ ಎಸ್.ಬಿ.ಐ ಎ.ಟಿ.ಎಂನಲ್ಲಿ ಕಳ್ಳತನವಾಗಿದ್ದು, ರಾತ್ರಿ ಸಮಯದಲ್ಲಿ ಈ ದರೋಡೆ ನಡೆದಿದೆ ಎನ್ನಲಾಗಿದೆ.
ತಾಳೂರು ರಸ್ತೆಯಲ್ಲಿ ಎಲ್ಲೂ ಸಿಸಿ ಕ್ಯಾಮರಾಗಳಿಲ್ಲ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಖದೀಮರು, ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಆಗಮಿಸಿ, ಎ.ಟಿ.ಎಂ ಕೇಂದ್ರದಲ್ಲಿ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆದಿದೆ. ಹಣ ಎಷ್ಟು ದರೋಡೆ ಆಗಿದೆ ಅನ್ನೋ ಮಾಹಿತಿ ಬಹಿರಂಗವಾಗಿಲ್ಲ. ಕಳೆದ ತಿಂಗಳಿನಿಂದ ಬಳ್ಳಾರಿ ನಗರದಲ್ಲಿ ಗ್ಯಾಂಗ್ ಓಡ್ತಾಡ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಪೊಲೀಸರಿಗೆ ಮಾಹಿತಿ ಇದ್ರೂ ಕಳ್ಳತನ ಆಗಿರೋದಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ನಗರದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.