ಚಿಕ್ಕಮಗಳೂರು:- ಇಲ್ಲಿನ ಆಂತರಿಕ ಭದ್ರತಾ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕಡೂರು ಪಟ್ಟಣದ ಕಲ್ಲುಗುಂಡಿಯಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ಶೇಖರಿಸಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ವೆಂಕಟೇಶ್ ಬಂಧಿತ ಆರೋಪಿ. ಆರೋಪಿ ಕಲ್ಲು ಕೊರೆಗಳಲ್ಲಿ ಸೈಜ್ ಬಳಸುವ 388 ಜಿಲೆಟಿನ್ ಪೆಸ್ಟ್ ಟ್ಯೂಬ್, 250 ಅಡಿ ಬತ್ತಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ. ಖಚಿತ ಮಾಹಿತಿ ಪಡೆದ ಪೊಲೀಸರು, ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದ್ದು, ಆತನನ್ನು ಬಂಧಿಸಿ, ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.