ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಜಯನಗರದ 4ನೇ ಬ್ಲಾಕ್‌ನಲ್ಲಿ ಬಿಎಂಟಿಸಿ ಬಸ್ಸಿನ ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವನ್ನಪ್ಪಿದ ಘಟನೆ ಜರುಗಿದೆ.
64 ವರ್ಷದ ಸಂಪಂಗಿ ಮೃತ ವ್ಯಕ್ತಿ. ಸಂಪಂಗಿ ಹತ್ತುವ ಸಮಯದಲ್ಲಿ ಚಾಲಕ ಬಾಗಿಲು ಬಂದ್ ಮಾಡಿದ್ದಾನೆ. ಬಂದ್ ಮಾಡಿದ್ದರಿಂದ ಸಂಪಂಗಿಯ ಕೈ ಬಾಗಿಲಿನ ಒಳಗಡೆ ಇದ್ದರೆ, ದೇಹ ಹೊರಗಡೆ ಇತ್ತು. ಬಸ್ಸು ಮುಂದಕ್ಕೆ ಹೋಗುತ್ತಿದ್ದಂತೆ ಚಕ್ರದ ಅಡಿಗೆ ಬಿದ್ದು ಸಂಪಂಗಿ ಸಾವನ್ನಪ್ಪಿದ್ದಾರೆ. ಜಯನಗರ ಬಸ್ ನಿಲ್ದಾಣದಿಂದ ಎಲೆಕ್ಟ್ರಿಕ್ ಬಸ್ ಮೆಜೆಸ್ಟಿಕ್ ಕಡೆಗೆ ಹೊರಟಿದ್ದ ವೇಳೆ ಈ ದುರಂತ ಸಂಭವಿಸಿದೆ.
ಸ್ಥಳಕ್ಕೆ ಜಯನಗರ ಪೊಲೀಸರು ಆಗಮಿಸಿದ್ದು ಈಗ ಮೃತ ಸಂಪಂಗಿಯ ಕುಟುಂಬಸ್ಥರನ್ನು ಸಂಪರ್ಕಿಸುತ್ತಿದ್ದಾರೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.



