Breaking News: ಗಿಫ್ಟ್ ಆಗಿ ಬಂದಿದ್ದ ಬೈಕ್ ಸುಟ್ಟು ಹಾಕಿದ್ದ ಯುವಕ ಅರೆಸ್ಟ್!

0
Spread the love

ಬೆಂಗಳೂರು:- ನಗರದ ಬಸವೇಶ್ವರನಗರ ಠಾಣಾ ವ್ಯಾಪ್ತಿಯ ಹಾವನೂರು ಸರ್ಕಲ್‌ ಬಳಿ ಗಿಫ್ಟ್‌ ಆಗಿ ಬಂದಿದ್ದ ಬೈಕ್‌ಗೆ ನಡುರಸ್ತೆಯಲ್ಲೇ ಬೆಂಕಿಯಿಟ್ಟ ಯುವಕನನ್ನು ಅರೆಸ್ಟ್ ಮಾಡಲಾಗಿದೆ.

Advertisement

ಯಶವಂತ್‌ ಎಂಬ ಯುವಕ ತನ್ನ ಪಲ್ಸರ್‌ ಬೈಕ್‌ಗೆ ಬೆಂಕಿಯಿಟ್ಟು ಸುಟ್ಟುಹಾಕಿದ್ದಾನೆ. ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ‌ ನಂದಿಸಿದರು. ಪೊಲೀಸರು ಯುವಕನಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೆ ಯುವಕನನ್ನು ಬಂಧಿಸಲಾಗಿದೆ. KA 02 LD 3269 ಎಂಬ ತನ್ನ ಬೈಕ್‌ಗೆ ಯುವಕ ನಡುರಸ್ತೆಯಲ್ಲೇ ಬೆಂಕಿಯಿಟ್ಟು ಸ್ಥಳದಿಂದ ಪರಾರಿಯಾಗಿದ್ದ. ತಂದೆ-ತಾಯಿಗೆ ಹುಷಾರಿಲ್ಲದೇ ಹಣಕ್ಕಾಗಿ ಪರದಾಡಿದ್ದ. ಬೈಕ್ ಅಡ ಇಟ್ಟು ಹಣಕ್ಕೂ ಪರದಾಡಿದ್ದ. ಅದರೆ, ಬೈಕ್ ಯುವಕನ ಹೆಸರಲ್ಲಿ ಇರಲಿಲ್ಲ.

ಗಿಫ್ಟ್ ಕೊಟ್ಟಿದ್ದ ಬೈಕ್, ಗಿಫ್ಟ್ ಕೊಟ್ಟವರ ಹೆಸರಲ್ಲಿತ್ತು. ಇದರಿಂದ ಮನನೊಂದು ಬೈಕ್‌ಗೆ ಬೆಂಕಿ ಇಡಲು ನಿರ್ಧರಿಸಿದ್ದ ಎಂದು ತಿಳಿದುಬಂದಿದೆ.


Spread the love

LEAVE A REPLY

Please enter your comment!
Please enter your name here