ಸ್ತನ್ಯಪಾನದಿಂದ ರೋಗನಿರೋಧಕ ಶಕ್ತಿ ವೃದ್ಧಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸ್ತನ್ಯಪಾನವು ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯ ಒಂದು ಮೂಲಾಧಾರವಾಗಿದೆ. ಅತ್ಯುತ್ತಮ ಪೋಷಣೆಯೊಂದಿಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಸ್ತನ್ಯಪಾನವು ತಾಯಿ ಮತ್ತು ಮಗುವಿನ ನಡುವೆ ಒಂದು ವಿಶಿಷ್ಟ ಬಾಂಧವ್ಯವನ್ನು ಬೆಳೆಸುತ್ತದೆ ಎಂದು ಗದುಗಿನ ಸ್ತ್ರೀರೋಗ ತಜ್ಞ ವೈದ್ಯರಾದ ಡಾ. ವಿಶ್ವಾಸ ಬಗೂಟಿ ಹೇಳಿದರು.

Advertisement

ಅವರು ಬುಧವಾರ ಗದಗ ಐಎಂಎ ನಗರದ ಡಾ. ಉದಯ ಕುಲಕರ್ಣಿ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಮಹಿಳೆಯರಿಗೆ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಪ್ರತಿವರ್ಷ ಆಗಸ್ಟ್ 1ರಿಂದ 7ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಮಗು ಜನಿಸಿದ ಅರ್ಧ ಗಂಟೆಯೊಳಗೆ ತಾಯಿಯು ಮಗುವಿಗೆ ಎದೆಹಾಲು ಕುಡಿಸಬೇಕು. ಸ್ತನ್ಯಪಾನ ಮಹತ್ವದ ಪೋಷಕಾಂಶಗಳನ್ನು ಒದಗಿಸುತ್ತದೆ, ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನ್ಯುಮೋನಿಯಾ, ಪ್ರಾಣಾಂತಿಕ ರೋಗಗಳಿಂದ ರಕ್ಷಣೆ ನೀಡಿ, ಮಗುವಿನ ಬೆಳವಣಿಗೆಯನ್ನು ಅಭಿವೃದ್ಧಿಪಡಿಸುತ್ತದೆ ಎಂದರು.

ಎದೆ ಹಾಲು ಶಿಶುವಿನ ಅಗತ್ಯಗಳಿಗೆ ಅನುಗುಣವಾಗಿ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಪರಿಪೂರ್ಣ ಸಮತೋಲನವನ್ನು ಒದಗಿಸುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಅತ್ಯುತ್ತಮ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಸುವಿನ ಹಾಲಿಗಿಂತ ತಾಯಿಯ ಎದೆಹಾಲು ಮಗುವಿಗೆ ಅಮೃತದಂತೆ ಹಾಗೂ ರೋಗನಿರೂಧಕ ಶಕ್ತಿಯುಳ್ಳದ್ದಾಗಿದೆ ಎಂದರು.

ಡಾ. ಉದಯ ಕುಲಕರ್ಣಿ ಹಾಗೂ ಡಾ. ರಾಧಿಕಾ ಕುಲಕರ್ಣಿ ಅವರು ಪ್ರತಿ ವರ್ಷ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿಕೊಂಡು ಬಂದಿರುವದು ಅಭಿನಂದನೀಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಉದಯ ಕುಲಕರ್ಣಿ ಮಾತನಾಡಿ, ಶಿಶುಗಳಿಗೆ ಎದೆ ಹಾಲು ಸೂಕ್ತ ಆಹಾರವಾಗಿದೆ. ಇದು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು, ಬೆಳವಣಿಗೆಯ ಅಂಶಗಳನ್ನು ಒಳಗೊಂಡಿದೆ. ಮಗುವಿನ ದೈಹಿಕ ಮತ್ತು ಅರಿವಿನ ಯೋಗಕ್ಷೇಮದ ಮೇಲೆ ಎದೆಹಾಲುಣಿಸುವಿಕೆಯ ಆಳವಾದ ಪ್ರಭಾವವನ್ನು ಬಿರಬಲ್ಲದು ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ ಎಂದರು.

ಎದೆ ಹಾಲು ಶಿಶುಗಳನ್ನು ಸೋಂಕುಗಳಿಂದ ರಕ್ಷಿಸುತ್ತದೆ, ಅತಿಸಾರ, ಉಸಿರಾಟದ ಕಾಯಿಲೆಗಳು, ಕಿವಿ ಸೋಂಕುಗಳು ಮತ್ತು ಇತರ ಬಾಲ್ಯದ ಕಾಯಿಲೆಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಅಧ್ಯಯನಗಳು ಎದೆಹಾಲುಣಿಸುವಿಕೆಯು ಹೆಚ್ಚಿನ ಐಕ್ಯೂ ಅಂಕಗಳು, ಸುಧಾರಿತ ಅರಿವಿನ ಕಾರ್ಯ ಮತ್ತು ಉತ್ತಮ ಶೈಕ್ಷಣಿಕ ಕಾರ್ಯಕ್ಷಮತೆಗೆ ಸಂಬಂಧ ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಗದಗ ಐಎಂಎ ನಿಕಟಪೂರ್ವ ಅಧ್ಯಕ್ಷೆ, ಸ್ತಿçà ರೋಗ ತಜ್ಞೆ ಡಾ. ರಾಧಿಕಾ ಕುಲಕರ್ಣಿ, ಸ್ತನ್ಯಪಾನದಿಂದ ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆಯಾಗುವವು. ಎದೆಹಾಲು ಕುಡಿದ ಶಿಶುಗಳಿಗೆ ನಂತರದ ಜೀವನದಲ್ಲಿ ಬೊಜ್ಜು, ಮಧುಮೇಹ, ಆಸ್ತಮಾ ಮತ್ತು ಕೆಲವು ಅಲರ್ಜಿಗಳು ಬರುವ ಸಾಧ್ಯತೆ ಕಡಿಮೆ. ಸ್ತನ್ಯಪಾನವು ಶಿಶುಗಳ ಕಾಯಿಲೆಗಳು ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಕಡಿಮೆ ಮಾಡುವ ಮೂಲಕ ಆರೋಗ್ಯ ವೆಚ್ಚವನ್ನು ಉಳಿಸುತ್ತದೆ. ತಾಯಿಯ ಎದೆಹಾಲು ಅಷ್ಟೊಂದು ಮಹತ್ವವವನ್ನು ಪಡೆದಿದೆ ಎಂದರು.


Spread the love

LEAVE A REPLY

Please enter your comment!
Please enter your name here