HomeChikkaballapurಬಿ-ರಿಪೋರ್ಟ್‌ಗೆ ಲಕ್ಷದ ಲಂಚ! 70 ಸಾವಿರ ಸ್ವೀಕರಿಸುವಾಗ ಪಿಎಸ್ಐ–ಎಎಸ್‌ಐ ಲೋಕಾಯುಕ್ತ ಬಲೆಗೆ!

ಬಿ-ರಿಪೋರ್ಟ್‌ಗೆ ಲಕ್ಷದ ಲಂಚ! 70 ಸಾವಿರ ಸ್ವೀಕರಿಸುವಾಗ ಪಿಎಸ್ಐ–ಎಎಸ್‌ಐ ಲೋಕಾಯುಕ್ತ ಬಲೆಗೆ!

For Dai;y Updates Join Our whatsapp Group

Spread the love

ಚಿಕ್ಕಬಳ್ಳಾಪುರ: ಪ್ರಕರಣವೊಂದರಲ್ಲಿ ‘ಬಿ-ರಿಪೋರ್ಟ್’ ಸಲ್ಲಿಸಲು ರೂ.1 ಲಕ್ಷ ಲಂಚ ಬೇಡಿಕೆ ಇಟ್ಟಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಹಾಗೂ ಎಎಸ್‌ಐ ವೆಂಕಟೇಶಪ್ಪ ಅವರು ಕರ್ನಾಟಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮೊಟ್ಲೂರು ಗ್ರಾಮದ ರಘು ಎಂಬಾತನ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ‘ಬಿ-ರಿಪೋರ್ಟ್’ ಸಲ್ಲಿಸಿ ಪ್ರಕರಣವನ್ನು ಮುಚ್ಚುವ ಭರವಸೆ ನೀಡಿ ಇಬ್ಬರು ಪೊಲೀಸರು ರೂ.1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರೆಂದು ತಿಳಿದು ಬಂದಿದೆ. ಮಾತುಕತೆ ಬಳಿಕ ರೂ.70 ಸಾವಿರಕ್ಕೆ ಒಪ್ಪಂದವಾಗಿದ್ದು, ಅದರಂತೆ ಕನ್ನಡ ಭವನದ ಸಮೀಪ ಹಣ ಹಸ್ತಾಂತರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ಹಣ ಸ್ವೀಕರಿಸುವ ಕ್ಷಣದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದು, ಸ್ಥಳದಲ್ಲೇ ಮಹಜರು ನಡೆಸಲಾಗಿದೆ. ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಮುಂದುವರಿಸಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!