ಸೌಂದರ್ಯವರ್ಧಕ ವೃತ್ತಿ ಬೇಡಿಕೆ ಹೊಂದಿದೆ : ನಾಗರತ್ನ ಮಾರನಬಸರಿ

0
Bridal Beauty Camp by Inner Wheel
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇನ್ನರ್ ವ್ಹೀಲ್ ಸಂಸ್ಥೆ ಗದಗ-ಬೆಟಗೇರಿ ಹಾಗೂ ಕೆಎಲ್‌ಇ ಸೊಸೈಟಿಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಮಹಿಳೆಯರಿಗಾಗಿ ಎರಡು ದಿನಗಳ ಕೇಶ ವಿನ್ಯಾಸ ಹಾಗೂ ವಧು ಸೌಂದರ್ಯವರ್ಧಕ ಶಿಬಿರವನ್ನು ಏರ್ಪಡಿಸಲಾಗಿತ್ತು.

Advertisement

ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ನಾಗರತ್ನ ಮಾರನಬಸರಿಯವರು ಉದ್ಘಾಟಿಸಿ ಮಾತನಾಡಿ, ಮಹಿಳೆ ಆರ್ಥಿಕವಾಗಿ ಸಬಲೀಕರಣಗೊಂಡರೆ ಆಕೆ ಸಮಾಜದ ಮುಖ್ಯವಾಹಿನಿಗೆ ಬಂದಂತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯೂ ತನ್ನ ಸೌಂದರ್ಯದ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಿರುವುದರಿಂದ ಮಹಿಳಾ ಸೌಂದರ್ಯವರ್ಧಕ ವೃತ್ತಿಯು ಬಹು ಬೇಡಿಕೆಯಲ್ಲಿದೆ. ಈ ವೃತ್ತಿಯು ಗೌರವದೊಂದಿಗೆ ಉತ್ತಮ ಆದಯವನ್ನು ನೀಡುತ್ತಿದ್ದು, ಮಹಿಳೆಯರು ಸಮರ್ಥವಾಗಿ ನಿಭಾಯಿಸಬಲ್ಲ ಕಾಯಕವಾಗಿದೆಯೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸೊಸೈಟಿಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಕೆ. ವ್ಮಠ ಮಾತನಾಡಿ, ಮಹಿಳೆಯರು ಸಾಂಪ್ರದಾಯಕ ವಿದ್ಯಾಭ್ಯಾಸದ ಜೊತೆಗೆ ವಿವಿಧ ಕಲೆ ಹಾಗೂ ಕೌಶಲ್ಯಗಳನ್ನು ಕರಗತ ಮಾಡಿಕೊಂಡರೆ ತಮ್ಮ ಉಜ್ವಲವಾದ ಭವಿಷ್ಯಕ್ಕೆ ಸಹಾಯ ನೀಡಲಿದೆಯೆಂದರು.

ಪ್ರೇರಣಾ ಅಕಾಡೆಮಿಯ ಶೋಭಾ ಹಾಗೂ ಚೈತ್ರಾ ಅರುಣ ಗುಳಗೌಡರ ಸೌಂದರ್ಯ ವರ್ಧಕ ವೃತ್ತಿಯಲ್ಲಿ ಬಳಸುವ ವಿವಿಧ ವಸ್ತುಗಳ ಪರಿಚಯ ಹಾಗೂ ವಧುವಿಗೆ ಶೃಂಗಾರ ಮಾಡುವ ಕಲೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿ, ಚರ್ಮಕ್ಕೆ ಹಾನಿ ಮಾಡುವ ಯಾವುದೇ ವಸ್ತುಗಳನ್ನು ಬಳಸಬಾರದೆಂದು ಸಲಹೆ ನೀಡಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ವೀಣಾ ತಿರ್ಲಾಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಐಎಸ್‌ಓ ಪುಷ್ಪಾ ಭಂಡಾರಿ, ಸಾಗರಿಕ ಅಕ್ಕಿ, ಅಶ್ವಿನಿ ಜಗತಾಪ, ಪ್ರತಿಭಾ ಭದ್ರಶೆಟ್ಟಿ, ಶಿವಲೀಲಾ ಅಕ್ಕಿ, ಜಂಟಿ ಕಾರ್ಯದರ್ಶಿ ಜ್ಯೋತಿ ದಾನಪ್ಪಗೌಡರ್, ಪವಿತ್ರಾ ಬಿರಾದಾರ್, ಪ್ರೇಮಾ ಹಂದಿಗೋಳ್, ಶೀವಲೀಲಾ ಅಕ್ಕಿ, ಶುಭಾ ಕುಂದಗೋಳ, ಮಂಜುಳಾ ಅಕ್ಕಿ, ಜಯಶ್ರೀ ಪಾಟೀಲ, ಸುವರ್ಣ ಮದರಿಮಠ, ಸಂಗೀತ ಪಟ್ಟಣಶೆಟ್ಟಿ ಹಾಗೂ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here