ಹಾಸನ: ತಾಳಿ ಕಟ್ಟುವ ಕೊನೇ ಕ್ಷಣದಲ್ಲಿ ವಧು ಮದುವೆ ಬೇಡ ಎಂದು ನಿರಾಕರಿಸಿದ ಹಿನ್ನೆಲೆ ಮದುವೆ ಮುರಿದು ಬಿದ್ದಿರುವ ಘಟನೆಯೊಂದು ಹಾಸನದಲ್ಲಿ ನಡೆದಿದೆ. ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆಂದು ವಧು ಮದುವೆ ನಿರಾಕರಿಸಿದ್ದಾರೆ.
ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಮುಹೂರ್ತದ ವೇಳೆ ಪ್ರಿಯಕರನಿಂದ ಯುವತಿಗೆ ದೂರವಾಣಿ ಕರೆ ಬಂದಿದ್ದು, ತಕ್ಷಣವೇ ಮದುವೆ ಬೇಡ ಎಂದು ಯುವತಿ ನಿರಾಕರಿಸಿದ್ದಾರೆ. ಯುವತಿ ಹಠ ಮಾಡಿದ್ದಕ್ಕೆ ವರ ಕೂಡ ನನಗೂ ಈ ಮದುವೆ ಬೇಡ ಎಂದಿದ್ದಾರೆ. ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ಪಲ್ಲವಿ ಮದುವೆ ಬೇಡ ಎಂದು ಮನಸು ಬದಲಿಸಿದ್ದು.
ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಈ ವೇಳೆ ಯುವತಿ ಮನವೊಲಿಸಲು ಶತಾಯಗತಾಯ ಪೋಷಕರು ಪ್ರಯತ್ನ ಪಟ್ಟಿದ್ದು. ನಗರ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಯುವತಿ ಮದುವೆ ಬೇಡವೇ-ಬೇಡ ಎಂದು ಹಠ ಹಿಡಿದಿದ್ದು. ಮದುವೆ ಮನೆಯನ್ನು ತ್ಯಜಿಸಿ ಹೊರ ಹೋಗಿದ್ದಾಳೆ. ಮಗಳ ಮದುವೆ ಮುರಿದಿದ್ದನ್ನು ಕಂಡ ಪೋಷಕರು ಕಣ್ಣೀರಿಟ್ಟಿದ್ದಾರೆ.