HomeGadag Newsಶರಣ ತತ್ವಗಳನ್ನು ಮನೆ-ಮನಗಳಿಗೆ ತಲುಪಿಸಿ : ಡಾ.ತೋಂಟದ ಶ್ರೀಗಳು

ಶರಣ ತತ್ವಗಳನ್ನು ಮನೆ-ಮನಗಳಿಗೆ ತಲುಪಿಸಿ : ಡಾ.ತೋಂಟದ ಶ್ರೀಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಶಿರಹಟ್ಟಿಯ ಕೆ.ಎ. ಬಳಿಗೇರರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಶ್ರೀ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆದೇಶ ಪ್ರತಿಯನ್ನು ನೀಡಿ ಆಶೀರ್ವದಿಸಿದರು.

ನಂತರ ಮಾತನಾಡಿದ ಶ್ರೀಗಳು, ಪರಿಷತ್ತಿನ ಆಶಯದಂತೆ ಕಾರ್ಯಕ್ರಮಗಳನ್ನು ಆಯೋಜಿಸಿ ಶರಣರ ತತ್ವ ಚಿಂತನೆಗಳನ್ನು ಮನೆ-ಮನಗಳಿಗೆ ತಲುಪಿಸುವ ಕಾರ್ಯವನ್ನು ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಜಿಲ್ಲೆಯ ಹಿಂದಿನ ಜಿಲ್ಲಾಧ್ಯಕ್ಷರ ನೆರವಿನೊಂದಿಗೆ ಹಾಗೂ ಜಿಲ್ಲೆಯ ಎಲ್ಲ ಶರಣಬಂಧುಗಳ ಸಹಕಾರವನ್ನು ಪಡೆದುಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬೇಕೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿವಪ್ರಕಾಶ್ ಮಹಾಜನಶೆಟ್ಟರ, ಆಯ್.ಬಿ. ಬೆನಕೊಪ್ಪ, ಚಂದ್ರಕಾಂತ ನೂರ ಶೆಟ್ಟರ್, ನಾಗರಾಜ ಲಕ್ಕುಂಡಿ, ಎಂ.ಕೆ. ಲಮಾಣಿ, ವಿವೇಕಾನಂದ ಗೌಡ ಪಾಟೀಲ್, ಬಸವರಾಜ್ ಕೊಟಗಿ, ಕಲ್ಲಯ್ಯ ಸಾಲಿಮಠ, ವೆಂಕಟೇಶ್ ಮಾತಾಡೆ, ವೀರೇಶ್ ಬದಾಮಿ, ಸಿ.ಜಿ. ಹಿರೇಮಠ, ಪಿ.ಬಿ. ಕರಾಟೆ, ಅಕ್ಬರ್ ಯಾದಗಿರಿ, ಎಲ್.ಎಸ್. ಅರಳಹಳ್ಳಿ, ಎಸ್.ಎಂ. ಮರಿಗೌಡ್ರ್, ಎಂ.ಕೆ. ಕಳ್ಳಿಮಠ, ಬಸವರಾಜ್ ಸೆಲ್ಲೆಪ್ಪನವರ, ಎಂ.ಎ. ಮಕಾಂದರ್, ಸಿ.ಪಿ. ಕಾಳಗಿ, ಶಿವಮೂರ್ತಿ ಕರಿಗೌಡ್ರ ಮುಂತಾದವರು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!