ಬೆಂಗಳೂರು:- ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
Advertisement
ನಾರಾಯಣ ಸ್ವಾಮಿ(55) ಕೊಲೆಯಾದ ವ್ಯಕ್ತಿ. ಕಳೆದ ನವೆಂಬರ್ 11 ರಂದು ಮುನಿ ವೆಂಕಟಪ್ಪ ಹಾಗೂ ಮೃತ ನಾರಾಯಣ ಸ್ವಾಮಿ ಕುಡಿದು ಬಾರ್ ಮುಂದೆ ಗಲಾಟೆ ಮಾಡಿಕೊಂಡಿದ್ದಾರೆ. ತಂದೆಗೆ ನಾರಾಯಣ ಸ್ವಾಮಿ ಹಲ್ಲೆ ಮಾಡಿದ್ದಾನೆ ಅನ್ನೋ ಕೋಪಕ್ಕೆ ಮುನಿ ವೆಂಕಟಪ್ಪ ಮಗ ಅಜಯ್ ಎಂಬಾತ ನಾರಾಯಣ ಸ್ವಾಮಿಗೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾನೆ.
ಘಟನೆಯಲ್ಲಿ ನಾರಾಯಣ ಸ್ವಾಮಿಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಲ ಪೊಲೀಸರು, ಕೊಲೆಗಾರ ಅಜಯ್ ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


