ಚಂಡೀಗಢ: ಪಾಕಿಸ್ತಾನ ರೇಂಜರ್ಸ್‌ನ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಕುಮಾರ್ ಶಾ ಅವರನ್ನು ಇಂದು ಬೆಳಿಗ್ಗೆ 10.30ಕ್ಕೆ ಅಟ್ಟಾರಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಹೌದು ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನದ ಸೇನೆಯಿಂದ ಬಂಧನಕ್ಕೊಳಗಾಗಿದ್ದ ಯೋಧ ವಾಘಾ ಗಡಿ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ
ಏಪ್ರಿಲ್ 23 ರಂದು ಪಂಜಾಬ್‌ನ ಫಿರೋಜ್‌ಪುರ ಬಳಿ ಅಂತಾರಾಷ್ಟ್ರೀಯ ಗಡಿಯನ್ನು ಅಜಾಗರೂಕತೆಯಿಂದ ದಾಟಿದ ನಂತರ 182 ನೇ ಬೆಟಾಲಿಯನ್‌ನ ಬಿಎಸ್‌ಎಫ್ ಜವಾನ್ ಶಾ ಅವರನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ್ದರು. ಇದೀಗ ಪಾಕ್ ರೇಂಜರ್‌ಗಳು 20 ದಿನಗಳ ಬಳಿಕ ಇಂದು ಅಟ್ಟಾರಿ ಗಡಿ ಮೂಲಕ ಬಿಡುಗಡೆಗೊಳಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಭೂಪ್ರದೇಶಕ್ಕೆ ಬಿಎಸ್‌ಎಫ್ ಕಾನ್‌ಸ್ಟೆಬಲ್ ಆಕಸ್ಮಿಕವಾಗಿ ದಾಟಿಹೋಗಿದ್ದು ರಾಜತಾಂತ್ರಿಕ ಅಂತ್ಯವಾಗಿದೆ, ಪಾಕಿಸ್ತಾನ ರೇಂಜರ್‌ಗಳು ಭಾರತೀಯ ಪಡೆಗಳೊಂದಿಗಿನ ಎಲ್ಲಾ ಧ್ವಜ ಸಭೆಗಳನ್ನು ಸ್ಥಗಿತಗೊಳಿಸಿದ್ದರು.
ಪೂರ್ಣಮ್ ಕುಮಾರ್ ಶಾ ಅವರನ್ನು ಲಾಹೋರ್-ಅಮೃತಸರ ವಲಯದ ರೇಂಜರ್ಸ್ ನೆಲೆಗೆ ಸ್ಥಳಾಂತರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಕಾನ್‌ಸ್ಟೆಬಲ್ ಅವರ ಪತ್ನಿ ರಜನಿ ಶಾ ಅವರು ಬಿಎಸ್‌ಎಫ್‌ನ ಪಶ್ಚಿಮ ಕಮಾಂಡ್‌ನ ಹಿರಿಯ ಅಧಿಕಾರಿಗಳೊಂದಿಗೆ ಈ ವಿಷಯದ ಕುರಿತು ಮಾತನಾಡಲು ಪಶ್ಚಿಮ ಬಂಗಾಳದಿಂದ ಪಂಜಾಬ್‌ಗೆ ಪ್ರಯಾಣ ಬೆಳೆಸಿದ್ದರು
ಸೇನಾ ಸಮವಸ್ತ್ರ ಧರಿಸಿದ್ದರು ಹಾಗೂ ಸೇವಾ ಬಂದೂಕು ಹೊಂದಿದ್ದರು. ರೈತರೊಂದಿಗೆ ಇದ್ದ ಇವರು, ವಿಶ್ರಾಂತಿಗಾಗಿ ನೆರಳು ಅರಸಿ ಹೊರಟಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ ಸಿಂಗ್ ಅವರನ್ನು ಪಾಕಿಸ್ತಾನಿ ಸೇನೆ ವಶಕ್ಕೆ ಪಡೆದಿದೆ ಎಂದು ಮೂಲಗಳು ಹೇಳಿವೆ.


