ಬೆಂಗಳೂರು:- ಬಿಡಿಎ ಹೌಸಿಂಗ್ ನಿರ್ಮಾಣ ಕೇಸ್ ನಲ್ಲಿ ಮಾಜಿ ಸಿಎಂ BS ಯಡಿಯೂರಪ್ಪಗೆ ಸಂಕಷ್ಟ ಎದುರಾಗಿದ್ದು, ಪ್ರಾಸಿಕ್ಯೂಷನ್ಗೆ ಕೋರಿ ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಕಡತ ರವಾನೆ ಮಾಡಿದೆ.
ಈ ಹಿಂದೆ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನದಂತೆ ಬಿಡಿಎ ಹೌಸಿಂಗ್ ನಿರ್ಮಾಣ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಇಂದು ಸರ್ಕಾರ, ರಾಜ್ಯಪಾಲರಿಗೆ ಕಡತ ರವಾನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಏನಾಗುತ್ತೋ ಏನೋ ಎಂದು ಬಿಎಸ್ವೈಗೆ ಢವಢವ ಶುರುವಾಗಿದೆ.
ಬಿಡಿಎ ಹೌಸಿಂಗ್ ನಿರ್ಮಾಣ ಪ್ರಕರಣ ಸಂಬಂಧ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ಮತ್ತೊಮ್ಮೆ ರಾಜ್ಯಪಾಲರಿಗೆ ಮನವಿ ಮಾಡಲು ಕಳೆದ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಇಂದು ರಾಜ್ಯಪಾಲರಿಗೆ ಬಿಎಸ್ವೈ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ಕಡತ ರವಾನಿಸಿದೆ. ಆದ್ರೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದರ ಮೇಲೆ ಬಿಎಸ್ವೈ ಭವಿಷ್ಯ ನಿರ್ಧಾರವಾಗಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಜೆ ಅಬ್ರಾಹಂ ದೂರಿನ ಮೇರೆಗೆ 2020ರಲ್ಲೂ ರಾಜ್ಯಪಾಲರಿಗೆ ಅನುಮತಿ ಕೋರಿ ಕಡತ ಮಂಡಿಸಲಾಗಿತ್ತು. ಆದರೆ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲು ರಾಜ್ಯಪಾಲರು ತಿರಸ್ಕರಿಸಿದ್ದರು. ಈಗ ಮತ್ತೊಮ್ಮೆ ಸಿದ್ದರಾಮಯ್ಯ ಸರ್ಕಾರ, ಅನುಮತಿ ಮರುಪರಿಶೀಲಿಸುವಂತೆ ಕೋರಿ ಕಡತ ಕಳುಹಿಸಿದೆ.
ಆದರೆ ಅಂತಿಮವಾಗಿ ರಾಜ್ಯಪಾಲರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುವುದನ್ನು ಕಾದುನೋಡಬೇಕಾಗಿದೆ.