ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಶ್ವಮಾನವ, ಆಧುನಿಕ ಮನು, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರರ 69ನೇ ಪರಿನಿರ್ವಾಣ ದಿನವನು ಆಚರಿಸಿದರು.
ಸಂಘದ ಮುಖಂಡರುಗಳಾದ ಸತೀಶ ಎಚ್.ಹೂಲಿ, ಗುರಪ್ಪ ಬಿಳೆಯಲಿ, ಬಸವರಾಜ ಹಿರೇಮಠ, ಕಿಟ್ಟು ಬಿಳೆಯಲಿ, ಶಿವಪ್ಪ ಕಾಳಿ, ಮಲ್ಲಪ್ಪ ಚಲವಾದಿ, ಬಸವರಾಜ ಕಾಳಿ, ಪ್ರಕಾಶ ಬಣಕಾರ, ಹನಮಂತ ಹುಣಸೀಗಿಡದ, ದುರ್ಗಪ್ಪ ಚಲವಾದಿ ಮುಂತಾದವರು ಭಾಗವಹಿಸಿ ಗೌರವ ಸಲ್ಲಿಸಿದರು.



