ಎಮ್ಮೆ ಕಳ್ಳರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ತಾಲೂಕಿನ ಹಲುವಾಗಲು ಠಾಣಾ ವ್ಯಾಪ್ತಿಯ ತುಂಬಿಗೆರೆ ಗ್ರಾಮದ ಕನ್ನಪ್ಪನವರ ನೀಲಪ್ಪನವರಿಗೆ ಸೇರಿದ ಎಮ್ಮೆ ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕರ ಆದೇಶದಂತೆ ಸಿಪಿಐ ಮಹಂತೇಶ್ ಸಜ್ಜನ್ ಮತ್ತು ಹಲುವಾಗಲು ಪಿಎಸ್‌ಐ ಕಿರಣ್ ಕುಮಾರ್ ಎ ತಂಡದೊAದಿಗೆ ಆರೋಪಿತರನ್ನು ಬಂಧಿಸುವಲ್ಲಿ ಬುಧವಾರ ಯಶಸ್ವಿಯಾಗಿದ್ದಾರೆ.

Advertisement

ಆರೋಪಿಗಳಾದ ಹೆಚ್.ಆರ್. ಅಭಿಷೇಕ್ ಹರಿಹರ ತಾಲೂಕು, ದುಗ್ಗಾವತಿ ಗ್ರಾಮದವರಾದ ಎಸ್.ವಿ. ರಮೇಶ್, ಕೆ. ಕೆಂಚಪ್ಪ, ಹಾಲೇಶ್ ಬಿ, ಚಂದು ಸಿ ಇವರಿಂದ ಪೊಲೀಸರು 55 ಸಾವಿರ ಬೆಲೆಯ ಎಮ್ಮೆ, ಕಳ್ಳತನಕ್ಕೆ ಬಳಸಿದ್ದ ಟಾಟಾ ಎಸಿ ಗೂಡ್ಸ್ ವಾಹನ, ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಪತ್ತೆ ಕಾರ್ಯ ಕೈಗೊಂಡ ಪೊಲೀಸ್ ಸಿಬ್ಬಂದಿ ವರ್ಗಕ್ಕೆ ವಿಜಯನಗರ ಜಿಲ್ಲಾ ಹೆಚ್ಚುವರಿ ಎಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here