ಬಾಗಲಕೋಟೆ:- ಎರಡು ಬೀದಿ ಗೂಳಿಗಳ ಕಾದಾಟಕ್ಕೆ ವಾಹನಗಳು ಜಖಂಗೊಂಡಿರುವ ಘಟನೆ ಬಾಗಲಕೋಟೆಯ ನವನಗರದಲ್ಲಿ ಜರುಗಿದೆ.
Advertisement
ಕಾದಾಡುತ್ತಾ ಬೈಕ್ ಮೇಲೆ ಗೂಳಿಗಳು ಎಗರಿದ್ದರಿಂದ ಬೈಕ್‌ಗಳು ಕೆಳಗೆ ಬಿದ್ದಿದೆ. ಬಿಡಾಡಿ ದನಗಳ ನಿಯಂತ್ರಣಕ್ಕೆ ಬಾಗಲಕೋಟೆ ನಗರಸಭೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬಿಡಾಡಿ ಗೂಳಿಗಳ ಹಾವಳಿ ತಪ್ಪಿಸಿ ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.
ಇನ್ನೂ ಜಿಲ್ಲೆಯಲ್ಲಿ ಬಿಡಾಡಿ ಗೂಳಿಗಳ ಕಾಟ ಹೆಚ್ಚಾಗಿದ್ದು, ರಸ್ತೆ ಮಧ್ಯೆ ಮದಗಜಗಳಂತೆ ಗೂಳಿಗಳ ಕಾದಾಟ ನಡೆಸುವುದು ಈಗ ಸಾಮಾನ್ಯವಾಗಿದೆ.