ಬೆಂಗಳೂರು: ಡೆಲಿವರಿ ಕೆಲಸ ಮಾಡುತ್ತಾ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ವೈಟ್ ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ಅಭಿಜಿತ್ ದಾಸ್ (23) ಬಂಧಿತ ಅರೋಪಿ. ಅಭಿಜಿತ್ ದಾಸ್ ಅಪಾರ್ಟ್ಮೆಂಟ್ಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದನು.
Advertisement
ಆರೋಪಿ ನಲ್ಲೂರು ಹಳ್ಳಿ ಭಾಗದ ಅಪಾರ್ಟ್ಮೆಂಟ್ ಗೆ ಖನ್ನ ಹಾಕಿದ್ದನು. ಅಪಾರ್ಟ್‌ಮೆಂಟ್ ಹಿಂಭಾಗದಿಂದ ಹತ್ತಿ, ಸ್ಲೈಡ್ ಡೋರ್ ಸರಿಸಿ ಮನೆಯೊಳಗೆ ನುಗ್ಗಿ ಕಳುವು ಮಾಡಿ ಪರಾರಿಯಾಗುತ್ತಿದ್ದನು.
ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿ ಬಂಧಿಸಿದ್ದಾರೆ. ಆರೋಪಿಯಿಂದ 50 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.