ಬೆಂಗಳೂರು:- ತಮಿಳುನಾಡಿನ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಅವರು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಎಎಸ್ ಅಧಿಕಾರಿ, ತಮಿಳುನಾಡಿನ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟು ಕಳುಹಿಸಿದ್ದಾರೆ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪಿಸಿದ್ದರು. ಹೀಗಾಗಿ ಸಸಿಕಾಂತ್ ಸೆಂಥಿಲ್ ಅವರು ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ.
ಧರ್ಮಸ್ಥಳ ʻಬುರುಡೆʼಪ್ರಕರಣದಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿ ಆರೋಪ ಮಾಡಿದ್ದಕ್ಕಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ಸೆಂಥಿಲ್ ಹೇಳಿದ್ದಾರೆ. 42 ಎಸಿಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಪಿಸಿಆರ್ ಫೈಲ್ ಮಾಡಿದ್ದು, ಸೆಪ್ಟೆಂಬರ್ 11ಕ್ಕೆ ವಿಚಾರಣೆ ನಡೆಯಲಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸೆಂಥಿಲ್, ಬುರುಡೆ ಕೇಸ್‌ನಲ್ಲಿ ನನ್ನ ಹೆಸರು ತಗೊಂಡಿದ್ದಾರೆ. ಆದ್ದರಿಂದ ಮೊಕದ್ದಮೆ ಹೂಡಿದ್ದೇನೆ. ಅವರು ಕೋರ್ಟ್‌ನಲ್ಲಿ ಉತ್ತರಿಸಲಿ ಎಂದು ಹೇಳಿದ್ದಾರೆ.
ಈ ಹ್ಯಾಂಗಲ್‌ನಲ್ಲಿ ಯಾರು ಸ್ಟೋರಿ ತಗೊಂಡು ಬಿಲ್ಡ್ ಮಾಡ್ತಿದ್ದಾರೆ ಅವರನ್ನು ಕೂಡ ತಗೊಳ್ತಿನಿ. ಈ ಕೇಸಲ್ಲಿ ನನ್ನ ಹೆಸರು ಯಾಕೆ ಬಂತು, ಗೊತ್ತಿಲ್ಲ. ನನ್ನ ಹೆಸರನ್ನ ತಮಿಳುನಾಡಿನ ಮಾಜಿ ಪೊಲೀಸ್ ಅಧಿಕಾರಿ ಅಲ್ಲಿ ತಗೊಂಡಿದ್ದಾರೆ. ಇದು ಹೀಗೆ ಬಿಟ್ಟರೆ, ಒಂದು ಸ್ಟೋರಿ ಕ್ರಿಯೇಟ್ ಆಗುತ್ತೆ. ನಾನು ಲೀಗಲ್ ಸಿಸ್ಟಮ್‌ನಲ್ಲಿ ಹೋಗ್ತೀದ್ದೀನಿ. ಸತ್ಯ ಏನಿದೆ ತನಿಖೆಯಿಂದ ಹೊರ ಬರಲಿ ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕದ ಸಂಪತ್ತು ಲೂಟಿ ಮಾಡಿ ಜೈಲು ಶಿಕ್ಷೆ ಅನುಭವಿಸಿರೊ ವ್ಯಕ್ತಿ ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ರೈಟ್ ವಿಂಗ್ ಪಾಲಿಟಿಕ್ಸ್ ವಿರೋಧ ಮಾಡಿಕೊಂಡು ಬಂದವನು ಆ ವ್ಯಕ್ತಿ. ಹೀಗಾಗಿ ನನ್ನನ್ನ ಟಾರ್ಗೆಟ್ ಮಾಡಿ ಆರೋಪ ಮಾಡಲಾಗಿದೆ. ಆರಂಭದಲ್ಲಿ ಸಿಂಪಲ್ ವಿಚಾರ ಮಾತನಾಡಬಾರದು ಅಂದುಕೊಂಡಿದ್ದೆ, ಆದ್ರೆ ದಿನೇ ದಿನೇ ನನ್ನ ಹೆಸರು ಕೆಡಿಸುವ ಕೆಲಸ ಆಗ್ತಿದೆ. ಆದ್ದರಿಂದ ಕೇಸ್ ದಾಖಲಿಸಿದ್ದೇನೆ. ದೆಹಲಿಯಲ್ಲಿ ನನಗೆ ಇನ್ನೂ ಮನೆ ಕೊಟ್ಟಿಲ್ಲ ಈ ಸರ್ಕಾರ. ಆ ಬರುಡೆ ಎಲ್ಲಿಂದ ಬಂತು, ಎಲ್ಲಿ ಸಿಗ್ತು ಅಂತಾನೂ ನನಗೆ ಗೊತ್ತಿಲ್ಲ ಎಂದಿದ್ದಾರೆ.



