ನಡುರಸ್ತೆಯಲ್ಲೇ ಹೊತ್ತಿ ಉರಿದ ಬಸ್: ಮಕ್ಕಳು ಸೇರಿ ಐವರು ದುರ್ಮರಣ!

0
Spread the love

ಲಕ್ನೋ:- ಚಲಿಸುತ್ತಿದ್ದಾಗಲೇ ಬಸ್ ಒಂದು ಹೊತ್ತಿ ಉರಿದ ಪರಿಣಾಮ ಮಕ್ಕಳು ಸೇರಿ ಐವರು ಸಾವನ್ನಪ್ಪಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಬಿಹಾರದಿಂದ ದೆಹಲಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ.

Advertisement

ಈ ವೇಳೆ ಪ್ರಯಾಣಿಕರು ನಿದ್ರೆ ಮಂಪರಿನಲ್ಲಿದ್ದರು. ಬಸ್‌ನಲ್ಲಿ ಹೊಗೆ ತುಂಬಲು ಪ್ರಾರಂಭಿಸಿದ ನಂತರವೇ ಅವರು ಎಚ್ಚರಗೊಂಡರು. ಆಘಾತಕಾರಿ ಸಂಗತಿಯೆಂದರೆ, ಚಾಲಕ ಕಿಟಕಿ ಒಡೆದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ 30 ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಆದರೆ ದುರಾದೃಷ್ಟವಶಾತ್ ಐವರು ಸಾವನ್ನಪ್ಪಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here