ಬಸ್ ನಲ್ಲಿ ಕಳ್ಳಿಯರ ಕೈಚಳಕ: 95 ಗ್ರಾಂ ಚಿನ್ನಾಭರಣ ಕದ್ದಿದ್ದ ಚಾಲಕಿಯರು ಅರೆಸ್ಟ್!

0
Spread the love

ಕಲಬುರಗಿ: ಫ್ರೀ ಬಸ್ ನಲ್ಲಿ ಪ್ರಯಾಣಿಸೋ ಮಹಿಳೆಯರೇ ಎಚ್ಚರ. ಯಾಕಂದ್ರೆ ಇಲ್ಲೊಂದು ಗ್ಯಾಂಗ್‌ ಆಕ್ಟ್ವೀವ್‌ ಆಗಿದೆ. ಬಸ್ ನಲ್ಲಿ ಫುಲ್ ರಶ್ ಇದ್ದಾಗ ಮಹಿಳೆಯರ ಕತ್ತಲ್ಲಿನ ಚಿನ್ನದ ಸರ ಕದ್ದು ಎಸ್ಕೇಪ್ ಆಗುತ್ತಾರೆ.

Advertisement

ಹೌದು ಕಲಬುರಗಿಯಿಂದ ಸೇಡಂ ಮತ್ತು ಸುಲೆಪೇಟ್ ಮಾರ್ಗವಾಗಿ ಹೋಗುವ ಬಸ್‌ ನಲ್ಲಿ ಹತ್ತಿ ಚಿನ್ನದ ಸರ ಕದ್ದು ಎಸ್ಕೇಪ್ ಆಗಿದ್ದ ಮೂರು ಜನ ಕಳ್ಳಿಯರನ್ನು ಬಂಧಿಸಿದ್ದಾರೆ. ಏಕತಾ ಉಪಾಧ್ಯಾಯ, ಸರಿತಾ ಪಾಟೀಲ್, ಕರುಣಾ ಬಂಧಿತ ಆರೋಪಿಗಳಾಗಿದ್ದು, ಬಂಧಿತರು ಮೂರು ಜನರು ಕಲಬುರಗಿ ನಗರದ ಬಾಪು ನಗರ ನಿವಾಸಿಗಳಾಗಿದ್ದಾರೆ.

ಚಾಲಾಕಿ ಕಳ್ಳಿಯರು ಬೆಳಗ್ಗೆ ಕಲಬುರಗಿ ಬಸ್ ನಿಲ್ದಾಣದಿಂದ ಬಸ್ ಹತ್ತಿಕೊಂಡು ಹೋಗಿ ಕಳ್ಳತನ ಮಾಡಿಕೊಂಡು ವಾಪಸ್ ಆಗ್ತಿದ್ದರು ಸದ್ಯ ಸೇಡಂ ಮತ್ತು ಸುಲೆಪೇಟ್ ಪೊಲೀಸರಿಂದ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 95 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.


Spread the love

LEAVE A REPLY

Please enter your comment!
Please enter your name here