ವಿಜಯಸಾಕ್ಷಿ ಸುದ್ದಿ, ಗದಗ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಮೇಲ್ವಿಚಾರಕರಾದ ಅಯ್ಯನಗೌಡರ ಅವರ ಸೇವಾ ನಿವೃತ್ತಿಯ ನಿಮಿತ್ತ ಗದಗ ಜಿಲ್ಲಾ ಆಟೋ ಚಾಲಕ-ಮಾಲಕರ ಸಂಘ, ಜೈಭೀಮ್ ಆಟೋ ಚಾಲಕ-ಮಾಲಕರ ಸಂಘದಿಂದ ಬಿಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ ಜಿಲ್ಲಾಧ್ಯಕ್ಷ ವಿಜಯ ಕಲ್ಮನಿ ಮಾತನಾಡಿ, ಅಯ್ಯನಗೌಡರು ಕೆಎಸ್‌ಆರ್‌ಟಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಕೂಡ ಆಟೋ ಚಾಲಕರೊಂದಿಗೆ ಉತ್ತಮ ಒಡನಾಟವನ್ನು ಬೆಳೆಸಿಕೊಂಡಿದ್ದರು. ಅವರ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಅಯ್ಯನಗೌಡರ ಮಾತನಾಡಿ, ಆಟೋ ಚಾಲಕರು ನಮ್ಮ ಮೇಲೆ ಇಟ್ಟಿರುವ ಅಭಿಮಾನ ಮತ್ತು ಗೌರವಕ್ಕೆ ಚಿರಋಣಿ. ಇನ್ನು ಮುಂದೆ ನಿಮ್ಮ ಸಂಘದ ಜೊತೆ ನಾನು ಕೂಡ ಒಬ್ಬ ಸದಸ್ಯನಾಗಿ ನೀವು ಮಾಡುವ ಸಮಾಜ ಸೇವೆಯಲ್ಲಿ ಮತ್ತು ಆಟೋ ಚಾಲಕರ ಸೇವೆಯಲ್ಲಿ ಭಾಗವಹಿಸುವುದರ ಜೊತೆಗೆ ನನ್ನ ಕೈಲಾದ ಸಹಾಯ, ಸಹಕಾರ ನೀಡುವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಅಗಸಿಮನಿ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ಬಸವರಾಜ ಮನಗುಂಡಿ, ಅಬೂಬಕರ ಅಣ್ಣಿಗೇರಿ, ಹುಲಗೇಶ ಗೆಜ್ಜೆಳ್ಳಿ, ಮೋಹನ ಶಿಂಗಾಡಿ, ಅಮೀನಸಾಬ ರೋಣದ, ಗೋಪಾಲ ಗೋರ್ಲೆ, ಉದಯ ಪನ್ನೂರ, ವಿಜಯೇಂದ್ರ ವಡವಿ, ಶಮೀರ ಭಾವಿಕಟ್ಟಿ, ಗಂಗಾಧರ ಬೆನ್ನಹಾಳಮಠ, ಲಕ್ಷ್ಮಣ ಕಟ್ಟಿಮನಿ, ಮಾರುತಿ ಕಟ್ಟಿಮನಿ, ಅನಿಲ ಅಗಸಿಮನಿ, ಪರಶುರಾಮ ಗೌಳಿ, ರಮೇಶ ನೆಗಡೆ, ರಾಘವೇಂದ್ರ ಗೆಜ್ಜೆಳ್ಳಿ, ರಫೀಕ ಮುಳಗುಂದ, ಮನೋಹರ ಚಲವಾದಿ, ಯಮನೂರ ಕಾಳಗಿ, ಮಂಜುನಾಥ ಪೂಜಾರ, ಮುತ್ತು ಹೊಸಳ್ಳಿ, ವಿಕಾಸ ದೊಡ್ಡಮನಿ, ಸುರೇಶ ಪನ್ನೂರ ಹಾಗೂ ಕೆಎಸ್‌ಆರ್‌ಟಿಸಿ ಮಹಾಮಂಡಳದ ಅಧ್ಯಕ್ಷ ಬಿ.ಎಸ್. ರಾಮನಹಳ್ಳಿ ಮುಂತಾದವರಿದ್ದರು.
ಗAಗಾಧರ ಬ್ಯಾಗೋಟಿ ಸ್ವಾಗತಿಸಿದರು. ಸುರೇಶ ಮಡಿವಾಳರ ನಿರೂಪಿಸಿದರು. ಈರಣ್ಣ ಗೆಜ್ಜೆಳ್ಳಿ ವಂದಿಸಿದರು.


