ದೊಡಬಳ್ಳಾಪುರ: ಚಲಿಸುತ್ತಿದ್ದ ಕೆಕೆಆರ್‌ಟಿಸಿ ಬಸ್ಸಿನ ಮುಂಭಾಗದ ಟೈರ್ ಸ್ಫೋಟಗೊಂಡ ಘಟನೆ ದೊಡಬಳ್ಳಾಪುರದ ತಾಲೂಕಿನ ರಾಷ್ಟ್ರಿಯ ಹೆದ್ದಾರಿ 648 ರ ಮೆಣಸಿ ಗೇಟ್ ಬಳಿ ನಡೆದಿದೆ.
Advertisement
ಸೂಲಿಕುಂಟೆಯಿಂದ ದೊಡ್ಡಬಳ್ಳಾಪುರಕ್ಕೆ ಆಗಮಿಸುತ್ತಿದ್ದ ವೇಳೆ ಅವಘಡ ಸಂಬಂಧವಿಸಿದ್ದು, ಬಸ್ ಚಾಲಕ ಮುನಿಶಾಮಪ್ಪನವರ ಸಮಯ ಪ್ರಜ್ಞೆಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ.
ಬಸ್ಸಿನ ಟೈಯರ್ ಸವೆದಿರುವ ಕಾರಣ ಅವಘಡಕ್ಕೆ ಕಾರಣ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.