ಮಂಗಳೂರು:- ಸಾಲ ಕೊಡುವುದಾಗಿ ಉದ್ಯಮಿಗಳಿಂದ ಕೋಟ್ಯಾಂತರ ರೂ. ವಂಚನೆ ಎಸಗಿದ ಖತರ್ನಾಕ್ ಆರೋಪಿಯನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
45 ವರ್ಷದ ರೋಹನ್ ಸಲ್ಡಾನಾ ಬಂಧಿತ ಆರೋಪಿ. ನಿನ್ನೆ ತನ್ನ ಐಷರಾಮಿ ಬಂಗಲೆಯಲ್ಲಿ ಮಲೇಶಿಯಾ ಯುವತಿರ ಜೊತೆ ಪಾರ್ಟಿ ಮಾಡುತ್ತಿರುವಾಗಲೇ ಎಂಟ್ರಿ ಕೊಟ್ಟ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ದೇಶದ ಐಷಾರಾಮಿ ವ್ಯಕ್ತಿಗಳು ಮತ್ತು ಉದ್ಯಮಿಗಳೇ ಈತನ ಟಾರ್ಗೆಟ್. ಸುಮಾರು ವರ್ಷಗಳಿಂದ ಇದನ್ನೇ ಕಾಯಕ ಮಾಡಿಕೊಂಡಿರುವ ರೋಹನ್ 200 ಕೋಟಿಗೂ ಅಧಿಕ ಹಣ ವಂಚಿಸಿದ್ದಾನೆ. ಸದ್ಯ ಉದ್ಯಮಿಯೊಬ್ಬರು ನೀಡಿದ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿದೆ.
ದೇಶದ ಐಷಾರಾಮಿ ವ್ಯಕ್ತಿಗಳು ಮತ್ತು ಉದ್ಯಮಿಗಳೇ ಈತನ ಟಾರ್ಗೆಟ್. ಸುಮಾರು ವರ್ಷಗಳಿಂದ ಇದನ್ನೇ ಕಾಯಕ ಮಾಡಿಕೊಂಡಿರುವ ರೋಹನ್ 200 ಕೋಟಿಗೂ ಅಧಿಕ ಹಣ ವಂಚಿಸಿದ್ದಾನೆ. ಸದ್ಯ ಉದ್ಯಮಿಯೊಬ್ಬರು ನೀಡಿದ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿದೆ.