ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ: ರೇಣುಕಾಚಾರ್ಯ

0
Spread the love

ದಾವಣಗೆರೆ:- ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ರೇಣುಕಾಚಾರ್ಯ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಿ.ವೈ ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಬೇಕು ಹಾಗೂ ಅವರ ಬೆಂಬಲಿಗರ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿದ ಯತ್ನಾಳ್ ಟೀಮ್‌‌ನಲ್ಲಿ ಗುರುತಿಸಿಕೊಂಡ ಬಿಜೆಪಿ ನಾಯಕರು ದೆಹಲಿಗೆ ತೆರಳಿ ಕೇಂದ್ರ ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದಾರೆ. ಇದಕ್ಕೆ ದೆಹಲಿಯಲ್ಲಿ ಚಳಿ ಇದೆ ಇಲ್ಲಿಂದ‌ ಹೋಗುವವರು ಅರೋಗ್ಯ ಜಾಗೃತವಾಗಿ ನೋಡಿಕೊಳ್ಳಿ ಎಂದರು.

ವಿಜಯೇಂದ್ರರನ್ನು ಬದಲಾವಣೆ ಮಾಡಲು ಆಗುವುದಿಲ್ಲ. ಅವರು ಉತ್ತಮ ಕೆಲಸ ಮಾಡ್ತಾ ಇದ್ದಾರೆ ಇದರಿಂದ ಅವರನ್ನು ಬದಲಾಯಿಸಲು ಆಗುವುದಿಲ್ಲ.‌ ನಾಳೆ ದೆಹಲಿಗೆ ಹೋಗುವವರಿಗೆ ಏನು ಹೇಳಲಿ, ದೆಹಲಿಯಲ್ಲಿ ಚಳಿ ಹೆಚ್ಚಿದೆ ಆರೋಗ್ಯ ಜಾಗೃತಿ ಎಂದು ಸಿದ್ದೇಶ್ವರ್ ಮತ್ತು ಟೀಂಗೆ ಕುಟುಕಿದರು. ಅಲ್ಲದೇ ನನಗೆ ನಾಯಕರು ಮೋದಿ, ಅಮಿತ್ ಷಾ, ಯಡಿಯೂರಪ್ಪ.‌ ಜಿ ಎಂ ಸಿದ್ದೇಶ್ವರ್ ನನಗೆ ನಾಯಕರಲ್ಲ ಎಂದರು.


Spread the love

LEAVE A REPLY

Please enter your comment!
Please enter your name here