ಸಿ.ಎಚ್. ಬಾಳನಗೌಡ್ರರಿಗೆ ಗೌರವ ಸನ್ಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ ಅವರಿಗೆ ಅವರ ಜನ್ಮ ಅಮೃತ ಮಹೋತ್ಸವದ ನಿಮಿತ್ತ ಗೌರವ ಸನ್ಮಾನ ನೀಡಿ ಆಶೀರ್ವದಿಸಲಾಯಿತು.

Advertisement

ಭಾನುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹಾಗೂ ಶ್ರೀ ಕೇದಾರ ಭೀಮಾಶಂಕರಲಿAಗ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗಿದ ಶ್ರೀಮದ್ ರಂಭಾಪುರಿ ಜಗದ್ಗುರು ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಸಿ.ಎಚ್. ಬಾಳನಗೌಡರಿಗೆ `ವಾರ್ತಾ ಸೇವಾ ಸಂಜೀವಿನಿ’ ಎಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಶ್ರೀಮದ್ ರಂಭಾಪುರಿ ರುದ್ರಮುನಿ ಜಗದ್ಗುರುಗಳವರ ಕುರಿತಾದ `ಧರ್ಮ ಚೇತನ’ ಕೃತಿ ಮತ್ತು ಸಿ.ಎಚ್. ಬಾಳನಗೌಡ್ರ ಅವರ ಬಾಳ ಪಯಣದ `ಬಾಳ ಹೊಂಗಿರಣ’ ಕೃತಿ ಬಿಡುಗಡೆಗೊಂಡವು. ಸಿ.ಎಚ್. ಬಾಳನಗೌಡ್ರ ಅವರು ಕಳೆದ ೩ ದಶಕಗಳಿಂದ ಶ್ರೀ ರಂಭಾಪುರಿ ಪೀಠದ ಸುದ್ದಿ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾರಂಭದಲ್ಲಿ ಸಚಿವರಾದ ಈಶ್ವರ ಖಂಡ್ರೆ, ಕೆ.ಜೆ. ಜಾರ್ಜ, ಶಾಸಕರಾದ ಟಿ.ಡಿ. ರಾಜೇಗೌಡ, ಹೆಚ್.ಡಿ. ತಮ್ಮಯ್ಯ ಹಾಗೂ ವಿವಿಧ ಮಠಗಳ ಶ್ರೀಗಳು ಉಪಸ್ಥಿತರಿದ್ದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಯಜ್ಞಪುರುಷ ಭಟ್ಟರು ಇದೇ ಸಂದರ್ಭದಲ್ಲಿ ಸಿ.ಎಚ್. ಬಾಳನಗೌಡ್ರರಿಗೆ ಶಾಲು ಹೊದೆಸಿ ಅಭಿನಂದಿಸಿದರು.


Spread the love

LEAVE A REPLY

Please enter your comment!
Please enter your name here